ಹಿಂದಿ ವಾಹಿನಿವೊಂದರಲ್ಲಿ ಪ್ರಸಾರವಾಗುವ ಜನಪ್ರಿಯ ಕಾಮಿಡಿ ಕಾರ್ಯಕ್ರಮ ‘ದಿ ಕಪಿಲ್ ಶೋ’. ಈ ಶೋನಲ್ಲಿ ಸಿನಿ ದಿಗ್ಗಜರು ಮಾತ್ರವಲ್ಲದೇ ರಾಜಕೀಯ ನಾಯಕರು ಪಾಲ್ಗೊಳ್ಳುತ್ತಾರೆ. ಈ ಶೋನಲ್ಲಿ ಅಭಿನಯ ಚಕ್ರವರ್ತಿ ಸುದೀಪ್ ಕೂಡಾ ಪಾಲ್ಗೊಂಡಿದ್ದರು.

‘ನಮಸ್ತೆ, ಕಪಿಲ್ ಶರ್ಮಾ ಶೋಗೆ ಸ್ವಾಗತ. ನಾನು ನಿಮ್ಮ ಕಿಚ್ಚ ಸುದೀಪ್. ಬೆಂಗಳೂರಿನಿಂದ ಇಲ್ಲಿಗೆ ಬಂದಿದ್ದೀನಿ. ಎಲ್ಲರಿಗೂ ಸ್ವಾಗತ. ಮತ್ತೊಮ್ಮೆ ಧನ್ಯವಾದಗಳು ’ ಎಂದು ಕಿಚ್ಚ ಮಾತನಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಶೇರ್ ಆಗುತ್ತಿದೆ.

ಕೆಲ ದಿನಗಳ ಹಿಂದೆ ಕಿಚ್ಚ ಶೋನಲ್ಲಿ ಭಾಗಿ ಆಗಿರುವುದರ ಬಗ್ಗೆ ಟ್ಟೀಟ್ಟರ್ ನಲ್ಲಿ ‘#KapilSharmaShow ನಲ್ಲಿ ಗಾಲಾ ಟೈಂ ಕಳೆದೆ. ಎಂದೂ ನಗದಷ್ಟು ಹೊಟ್ಟೆ ಹುಣ್ಣಾಗುವಂತೆ ನಕ್ಕಿದ್ದೇನೆ. ನನ್ನನ್ನು ಬರ ಮಾಡಿಕೊಂಡವರಿಗೆ ಧನ್ಯವಾದಗಳು’ ಎಂದು ಬರೆದುಕೊಂಡಿದ್ದರು.

ಕಪಿಲ್ ಶರ್ಮಾ ಕಾಮಿಡಿ ಶೋನಲ್ಲಿ ಕಿಚ್ಚ ಸುದೀಪ್!