. ಸಂಚಾರಿ ವಿಜಯ್ ಗೆ ಕನ್ನಡದ 10 ಸಿನಿಮಾಗಳು ಅಷ್ಟೆ ಅಲ್ಲದೆ ತಮಿಳು ಹಾಗೂ ಮಲಯಾಳಂ ಚಿತ್ರರಂಗದಿಂದಲೂ ಅವಕಾಶಗಳು ಬರುತ್ತಿರುವುದು ಅವರ ಅಭಿನಯ ಕಲೆಗೆ ಕನ್ನಡಿಹಿಡಿದಂತೆ
ಬೆಂಗಳೂರು(ಜು.24): ರಾಷ್ಟ್ರ ಪ್ರಶಸ್ತಿ ವಿಜೇತ ಸಂಚಾರಿ ವಿಜಯ್ ಈಗ ಸ್ಯಾಂಡಲ್ ವುಡ್ ಬ್ಯೂಸಿಯಷ್ಟ ನಟ, ಹೌದು,,, ಕನ್ನಡದ ಸೂಪರ್ ಸ್ಟಾರ್ ಗಳು ಸದ್ಯ 3-4 ಪ್ರಾಜೆಕ್ಟ್ ಗಳಿದ್ರೆ . ರಂಗಭೂಮಿ ಕಲಾವಿದ ಸಂಚಾರಿ ವಿಜಯ್ ಅವರ ಕೈಯಲ್ಲಿ ಬರೋಬ್ಬರಿ 10 ಪ್ರಾಜೆಕ್ಟ್ ಗಳಿವೆ. ಹೌದು, ಸಂಚಾರಿ ವಿಜಯ್ ಕೈಯಲ್ಲಿ ಹತ್ತು ಚಿತ್ರಗಳಿವೆ. ವಿಜಯ್ ಸದ್ಯಕ್ಕೆ ನನ್ ಮಗಳೇ ಹೀರೋಯಿನ್', ಕೃಷ್ಣ ತುಳಸಿ', ಪಾದರಸ', ವರ್ತಮಾನ', ಪಿರಂಗಿಪುರ', ಮೇಲೊಬ್ಬ ಮಾಯಾವಿ', ವರ್ತಮಾನ', ತಲೆದಂಡ', ಆರನೇ ಮೈಲಿ' ಹಾಗೂ ಆಟಕ್ಕುಂಟು ಲೆಕ್ಕಕ್ಕಿಲ್ಲ' ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಒಟ್ಟಾರೆ ವಿಜಯ್ ಸಿನಿಮಾಗಳು ಕಮರ್ಶಿಯಲ್ ಹೀರೋ ಆಗದೆ ಇದ್ರು, ಒಂದಷ್ಟು ಸಿನಿಮಾಗಳು ಅಷ್ಟಾಗಿ ಸಕ್ಸಸ್ ಕಾಣದೆ ಹೋದ್ರು. ಸಂಚಾರಿ ವಿಜಯ್ ಗೆ ಕನ್ನಡದ 10 ಸಿನಿಮಾಗಳು ಅಷ್ಟೆ ಅಲ್ಲದೆ ತಮಿಳು ಹಾಗೂ ಮಲಯಾಳಂ ಚಿತ್ರರಂಗದಿಂದಲೂ ಅವಕಾಶಗಳು ಬರುತ್ತಿರುವುದು ಅವರ ಅಭಿನಯ ಕಲೆಗೆ ಕನ್ನಡಿಹಿಡಿದಂತೆ
