ರಾಮ್‌ ಜೆ ಚಂದ್ರ ನಿರ್ದೇಶನದ ಈ ಚಿತ್ರದ ಟ್ರೇಲರ್‌ ಈಗಾಗಲೇ ಬಿಡುಗಡೆಗೊಂಡಿದ್ದು ನೋಡುಗರಲ್ಲಿ ಭರವಸೆ ಮೂಡಿಸಿದೆ.

‘ಈ ಸಿನಿಮಾ ಕಥೆಯೇ ವಿಶೇಷವಾಗಿದೆ. ಹೊಸತನದಿಂದ ಕೂಡಿದೆ ಎಂಬುದು ಟ್ರೇಲರ್‌ ಮೂಲಕ ತೋರಿಸಲಾಗಿದೆ. ಇದರಲ್ಲಿ ಸಂಚಾರಿ ವಿಜಯ್‌ ಯಾವ ರೀತಿಯ ಪಾತ್ರ ನಿರ್ವಹಿಸಿದ್ದಾರೆ ಎಂಬುದು ಕೂಡ ಅನಾವರಣಗೊಂಡಿದೆ. ಈ ಕಥೆಯನ್ನು ಬರೆಯುವಾಗಲೇ ನನ್ನ ಮನಸ್ಸಿನಲ್ಲಿ ಈ ಪಾತ್ರಕ್ಕೆ ಸಂಚಾರಿ ವಿಜಯ್‌ ಫಿಕ್ಸಾಗಿದ್ದರು. ಪ್ರತಿ ಹಂತದಲ್ಲೂ ಕುತೂಹಲ ಕೆರಳಿಸುವಂಥ ಸಿನಿಮಾ ಇದು. ಮನೋಲೋಕದ ಸುತ್ತ ನಡೆಯುವ ಕಥಾಹಂದರವೇ ‘ಆಟಕ್ಕುಂಟು ಲೆಕ್ಕಕ್ಕಿಲ್ಲ’.  ಪ್ರತಿ ಕ್ರೈಂ ನಡೆದಾಗಲೂ ಅದರ ಹಿಂದೆ ಹಲವು ರೀತಿಯ ಕಾರಣಗಳಿರುತ್ತವೆ.

ವಿಚಿತ್ರ ಗೆಟಪ್‌ನಲ್ಲಿ ಸಂಚಾರಿ ವಿಜಯ್

ಅವು ಗಂಭೀರವಾಗಿಯೂ ಇರುತ್ತವೆ. ಸಿಲ್ಲಿ ಅನ್ನಿಸುವಂತೆಯೂ ಇರುತ್ತವೆ. ಆದರೆ ಇಂಥ ಕ್ರೈಂಗಳ ಹಿಂದೆಯೂ ಮನಸ್ಸಿಗೆ ಸಂಬಂಧಿಸಿದ ಕಾರಣಗಳಿವೆ ಅನ್ನೋದು ಮನೋಶಾಸ್ತ್ರಜ್ಞರ ಪ್ರತಿಪಾದನೆ. ಇದು ಸತ್ಯವೂ ಹೌದು. ತೀರಾ ನಾರ್ಮಲ್‌ ಆಗಿರುವ ಯಾರೇ ಆದರೂ ಬೀಭತ್ಸ ಕೃತ್ಯಗಳಿಗೆ ಕೈ ಹಾಕಲು ಸಾಧ್ಯವೇ ಇಲ್ಲ. ಅಂಥಾದ್ದನ್ನು ಮಾಡುವವರ ಮನಸ್ಥಿತಿಯೇ ಪ್ರತಿಕೂಲವಾಗಿರುತ್ತೆ. ಅದು ಹೇಗೆ ಎನ್ನುವುದು ಈ ಚಿತ್ರದಲ್ಲಿ ನೋಡಬಹುದು’ ಎಂದು ನಿರ್ದೇಶಕರು ವಿವರಣೆ ಕೊಡುತ್ತಾರೆ.

ಹೊಸ ಲುಕ್’ನಲ್ಲಿ ಸಂಚಾರಿ ವಿಜಯ್

ಸುಮಾರು 40 ನಿುಷಗಳ ಕಾಲ ಸಿಜಿ ಕೆಲಸ ಮಾಡಲಾಗಿರುವ ಈ ಚಿತ್ರ ಸೈಕಾಲಾಜಿಕಲ್‌ ಸಸ್ಪೆನ್ಸ್‌ ಥ್ರಿಲ್ಲರ್‌ ಜಾನರ್‌ನಲ್ಲಿ ಮೂಡಿಬಂದಿದೆ. ಕನ್ನಡದಲ್ಲಿ ಈ ಮಾದರಿಯ ಸಿನಿಮಾ ಇದೇ ಮೊದಲಂತೆ. ಒಟ್ಟಿನಲ್ಲಿ ಸಂಚಾರಿ ವಿಜಯ್‌ ಅವರು ಇದೇ ಸೆ.27ರಂದು ತೆರೆ ಮೇಲೆ ಬರುತ್ತಿದ್ದಾರೆ.