. ಇಷ್ಟೆಲ್ಲ ಆದ ಮೇಲೆ ನಿರ್ಮಾಪಕ ಪದ್ಮನಾಭ್ ಅವರು ಹೇಳಿರುವ ಮಾತುಗಳು ಸತ್ಯ ಎಂದು ನಮಗೂ ನಂಬಿಕೆಯಾಗಿದೆ.

ಸಂಯುಕ್ತ ಹೆಗಡೆಯವರೊಂದಿಗೆ ಸಂಭಾಷಣೆಯ ತುಣುಕು

ಹಲೋ, ಸಂಯುಕ್ತಾ ಹೆಗ್ಡೆಯವರಾ? ಹೌದು.

ನಿಮ್ಮ ಬಗ್ಗೆ ಕಾಲೇಜ್ ಕುಮಾರ್ ನಿರ್ಮಾಪಕರು ಕೆಲವು ಆರೋಪ ಮಾಡಿದ್ದಾರೆ.

ಒಂದ್ ನಿಮಿಷ. (ಪಕ್ಕದಲ್ಲಿರೋ ಗೆಳತಿಯರ ಜೊತೆ ತಮಾಷೆ ಮಾತು )

(ಒಂದು ನಿಮಿಷದ ನಂತರ) ಹಲೋ (ಪಕ್ಕದ ಗೆಳತಿಯರ ಜೊತೆಗಿನ ತಮಾಷೆ ಮಾತು ಮುಂದುವರಿದಿದೆ)

(ಮತ್ತೊಂದು ನಿಮಿಷದ ನಂತರ)

ಹಲೋ...ಇದು ಕನ್ನಡ..

ಗೊತ್ತು.. ಮಾತಾಡ್ತೀನಿ ಇರ್ರಿ..

(ಮತ್ತೆ ಮುಂದುವರಿದ ನಗು, ಅಟ್ಟಹಾಸ)

ಮತ್ತೊಂದು ನಿಮಿಷದ ನಂತರ... ನನಗೆ ಟೀವಿಯಿಂದ ಫೋನ್ ಬರ್ತಿದೆ. ಅವರ ಜೊತೆ ಮಾತಾಡಬೇಕು ನಾನು...

ಸಂಯುಕ್ತ ಹೆಗ್ಡೆ ಬೆಳೆದಿದ್ದಾರೆ. ಸೂಪರ್ ಸ್ಟಾರಿಣಿ ಆಗಿದ್ದಾರೆ. ಫೋನ್ ಮಾಡಿದವರನ್ನು ಕಾಯಿಸುವುದನ್ನು ಕಲಿತಿದ್ದಾರೆ. ಪತ್ರಿಕೆಗಳಿಗಿಂತ ಟೀವಿ ಚಾನಲ್ಲುಗಳು ಮುಖ್ಯ ಎಂಬುದನ್ನು ಅರ್ಥಮಾಡಿಕೊಂಡಿದ್ದಾರೆ. ಮತ್ತೆ ಮತ್ತೆ ಫೋನ್ ಮಾಡಿದರೆ ಸ್ವೀಕರಿಸದೇ ಇರುವಷ್ಟು ಬಿಜಿಯಾಗಿದ್ದಾರೆ. ಇಷ್ಟೆಲ್ಲ ಆದ ಮೇಲೆ ನಿರ್ಮಾಪಕ ಪದ್ಮನಾಭ್ ಅವರು ಹೇಳಿರುವ ಮಾತುಗಳು ಸತ್ಯ ಎಂದು ನಮಗೂ ನಂಬಿಕೆಯಾಗಿದೆ. ಪದ್ಮನಾಭ್ ಅವರಿಗೆ ಸಂಯುಕ್ತಾ ಅವರು ಕಿರಿಕ್ಕು ಮಾಡಿರುವುದರ ಬಗ್ಗೆ ಅವರ ಪ್ರತಿಕ್ರಿಯೆ ತಿಳಿಯಲು ಫೋನ್ ಮಾಡಿದಾಗ ಇಷ್ಟೆಲ್ಲ ನಡೆದುಹೋಯಿತು. ಇವರನ್ನು ಚಿತ್ರಕ್ಕೆ ಹಾಕಿಕೊಳ್ಳುವ ಮೊದಲು ಎಚ್ಚರಿಕೆ ವಹಿಸುವುದು ಒಳ್ಳೆಯದು.