ತೆಲುಗು ಸಿನಿಮಾ ಸಮ್ಮೋಹನಮ್ ನಟ ಅಮಿತ್ ಪುರೋಹಿತ್ ಅಕಾಲಿಕ ಸಾವನ್ನಪ್ಪಿದ್ದಾರೆ. ಆದರೆ ಸಾವಿಗೆ ಕಾರಣ ತಿಳಿದು ಬಂದಿಲ್ಲ.
ತೆಲುಗು ಸಿನಿಮಾ 'ಸಮ್ಮೋಹನಮ್' ನಟ ಆಮಿತ್ ಪುರೋಹಿತ್ ಅಕಾಲಿಕ ಸಾವನ್ನಪ್ಪಿದ್ದಾರೆ. ಸಾವಿಗೆ ಕಾರಣ ತಿಳಿದು ಬಂದಿಲ್ಲ.
ಸಮ್ಮೋಹನಮ್ ನಟಿ ಅದಿತಿ ರಾವ್ ಹೈದರಿ, ನಟ ಸುಧೀರ್ ಬಾಬು, ನಿರ್ದೇಶಕ ಮೋಹನ್ ಕೃಷ್ಣ ಅಮಿತ್ ಸಾವಿಗೆ ಸಂತಾಪ ಸೂಚಿಸಿದ್ದಾರೆ.
ಅಮಿತ್ ಕುಟುಂಬಕ್ಕೆ ದುಃಖವನ್ನು ಭರಿಸುವ ಶಕ್ತಿಯನ್ನು ಭಗವಂತ ಕೊಡಲಿ. #Sanmohanam ಸೆಟ್ ನಲ್ಲಿ ನಿಮ್ಮ ಜೊತೆ ೊಳ್ಳೆಯ ಸಮಯ ಕಳೆದಿದ್ದೇವೆ. ನಿಮ್ಮ ಉಪಸ್ಥಿತಿಗೆ ಧನ್ಯವಾದಗಳು ಎಂದು ಅದಿತಿ ಸಂತಾಪ ಸೂಚಿಸಿದ್ದಾರೆ.
ಅಮಿತ್ ಪುರೋಹಿತ್ ಸಮ್ಮೋಹನಮ್ ಚಿತ್ರದಲ್ಲಿ ಅದಿತಿ ಬಾಯ್ ಫ್ರೆಂಡ್ ಪಾತ್ರ ಮಾಡಿದ್ದಾರೆ. ಅದೇ ರೀತಿ ಹಿಂದಿ ಸಿನಿಮಾ ಪಂಕ್ ಹಾಗೂ ಆಲಾಪ್ ನಲ್ಲೂ ನಟಿಸಿದ್ದರು.
