2 ತಿಂಗಳ ಮಗು ಹೊತ್ತು ಮುಳ್ಳಯ್ಯನಗಿರಿ ಬೆಟ್ಟ ಏರಿದ ನಟಿ ಸಮೀರಾ ರೆಡ್ಡಿ| ಕರ್ನಾಟಕದ ಅತಿದೊಡ್ಡ ಗಿರಿಶಿಖರವಾದ ಚಿಕ್ಕಮಗಳೂರಿನ ಮುಳ್ಳಯ್ಯನಗಿರಿ

ಚಿಕ್ಕಮಗಳೂರು[ಅ.01]: ನಟಿ ಸಮೀರಾ ರೆಡ್ಡಿ ಅವರು ಇತ್ತೀಚೆಗೆ ಕರ್ನಾಟಕದ ಅತಿದೊಡ್ಡ ಗಿರಿಶಿಖರವಾದ ಚಿಕ್ಕಮಗಳೂರಿನ ಮುಳ್ಳಯ್ಯನಗಿರಿಯನ್ನು ಹತ್ತಿದ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಇದರಲ್ಲೇನು ವಿಶೇಷ ಅಂತೀರಾ.

ಸಮೀರಾ ರೆಡ್ಡಿ ಅವರು ಎರಡು ತಿಂಗಳ ಹಿಂದಷ್ಟೇ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಟ್ರಕ್ಕಿಂಗ್‌ ವೇಳೆ ತನ್ನ 2 ತಿಂಗಳ ಹಸುಗೂಸಿನ ಜತೆ ಮುಳ್ಳಯ್ಯನಗಿರಿಯನ್ನು ಹತ್ತಿದ್ದಾರೆ. ‘ಮಗಳು ನೈರಾ ಜತೆ 6300 ಅಡಿ ಎತ್ತರದಲ್ಲಿರುವ ಮುಳ್ಳಯ್ಯನಗಿರಿಯನ್ನು ಹತ್ತಲು ಯತ್ನಿಸಿದೆ. ಆದರೆ, ಉಸಿರಾಟ ತೊಂದರೆಯಿಂದ ಅರ್ಧಕ್ಕೆ ನಿಲ್ಲಿಸಿದೆ ಎಂದು ವಿಡಿಯೋದಲ್ಲಿ ಹೇಳಿದ್ದಾಳೆ.

View post on Instagram

ಇದಕ್ಕೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನಟಿ ಸಮೀರಾ ಈ ಹಿಂದೆ ನೀರಿನಾಳದಲ್ಲಿ ‘ಬೇಬಿ ಬಂಪ್‌’ ಚಿತ್ರ ತೆಗೆಸಿಕೊಂಡು ಸುದ್ದಿಯಾಗಿದ್ದರು.