ಟಾಲಿವುಡ್ ನ ಸ್ವೀಟ್ ಕಪಲ್ ನಾಗ ಚೈತನ್ಯ ಮತ್ತು ಸಮಂತಾ  ಜೋಡಿ ಮದುವೆಯಾದ ಮೇಲೆ ಅಭಿಮಾನಿಗಳಿಗೆ ಒಂದೆಲ್ಲಾ ಒಂದು ಸುದ್ದಿ ನೀಡುತ್ತಲೇ ಬಂದಿದ್ದಾರೆ.  ಬೀಚ್ ನಲ್ಲಿ ಎಂಜಾಯ್ ಮಾಡುತ್ತಿದ್ದ ಫೋಟೋ ವೊಂದನ್ನು ಸಮಂತಾ ಅಪ್ ಲೋಡ್ ಮಾಡಿದ್ದರು. ಇದನ್ನು ಕಂಡ ಜಾಲತಾಣಿಗರು ಫೋಟೋವನ್ನು ಟ್ರೋಲ್ ಮಾಡಿದ್ದರು. ಇದೆಲ್ಲವನ್ನು ಕಂಡ ಸಮಂತಾ ತಕ್ಕದಾದ ಉತ್ತರವನ್ನೇ ಕೊಟ್ಟಿದ್ದಾರೆ.

ಹಿಂದೊಮ್ಮೆ ಕ್ರೀಡಾಂಗಣದಲ್ಲಿ ವಿರಾಟ್ ಕೊಹ್ಲಿ ಮಧ್ಯದ ಬೆರಳು ತೋರಿಸಿ ಸಖತ್ ಸುದ್ದಿಯಾಗಿದ್ದರು. ಈಗ ಸಮಂತಾ ಸರದಿ. 

ಸ್ಪೇನ್ ನ ಐಬಿಜಾದಲ್ಲಿ ಹನಿಮೂನ್ ಮಾಡಿಕೊಳ್ಳುತ್ತಿರುವ ಜೋಡಿ ವಿವಿಧ ಫೋಟೋ ಗಳನ್ನು ಅಪ್ ಲೋಡ್ ಮಾಡಿದೆ. ಆದರೆ ಅದರಲ್ಲಿನ ಒಂದು ಫೋಟೋ ಟ್ರೋಲ್ ಗೆ ಗುರಿಯಾಗಿದೆ. ಟ್ರೋಲ್ ಕಂಡು ಕೆಂಡಾಮಂಡಲವಾದ ಸಮಂತಾ ಮುಟ್ಟಿ ನೋಡಿಕೊಳ್ಳುವ ಉತ್ತರ ನೀಡಿದ್ದು ‘ಮಧ್ಯದ ಬೆರಳು’ ತೋರಿಸುವ ಚಿತ್ರ ಪೋಸ್ಟ್ ಮಾಡಿದ್ದಾರೆ.

ಈ ಮೂಲಕ ನಟಿಯರ ಬಗ್ಗೆ ಅಪಹಾಸ್ಯ ಮಾಡುವ, ಟ್ರೋಲ್ ಮಾಡುವವರಿಗೆ ಬಿಸಿ ಮುಟ್ಟಿಸಿದ್ದು ವ್ಯಂಗ್ಯದ ಭಾಷೆಯಲ್ಲಿ ಧನ್ಯವಾದ ಹೇಳಲು ಮರೆತಿಲ್ಲ.

View post on Instagram
View post on Instagram