ಬಾಲಿವುಡ್ ನಟ ಶಾರುಖ್ ಖಾನ್, ಸಲ್ಮಾನ್ ಖಾನ್ ಮತ್ತು ಅಕ್ಷಯ್ ಕುಮಾರ್ ವಿಶ್ವದಲ್ಲೇ ಅತ್ಯಂತ ಹೆಚ್ಚು ಸಂಭಾವನೆ ಪಡೆಯುತ್ತಿರುವ ಅಗ್ರ 10 ನಟರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.

ರ್ನ್ಯೂಯಾರ್ಕ್(ಆ.24): ಬಾಲಿವುಡ್ ನಟ ಶಾರುಖ್ ಖಾನ್, ಸಲ್ಮಾನ್ ಖಾನ್ ಮತ್ತು ಅಕ್ಷಯ್ ಕುಮಾರ್ ವಿಶ್ವದಲ್ಲೇ ಅತ್ಯಂತ ಹೆಚ್ಚು ಸಂಭಾವನೆ ಪಡೆಯುತ್ತಿರುವ ಅಗ್ರ 10 ನಟರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.

ಅಮೆರಿಕದ ನಿಯತಕಾಲಿಕೆ ಫೋರ್ಬ್ಸ್ ಅತಿಹೆಚ್ಚು ಸಂಭಾವನೆ ಪಡೆಯುತ್ತಿರುವ ನಟರ ಪಟ್ಟಿ ಬಿಡುಗಡೆ ಮಾಡಿದ್ದು, 244 ಕೋಟಿ ರು. ಆದಾಯದೊಂದಿಗೆ ಶಾರುಖ್ ಖಾನ್ 8ನೇ ಸ್ಥಾನ, 237 ಕೋಟಿ ರು. ಆದಾಯದೊಂದಿಗೆ ಸಲ್ಮಾನ್ ಖಾನ್ 9ನೇ ಸ್ಥಾನ ಮತ್ತು 227 ಕೋಟಿ ರು. ಆದಾಯದೊಂದಿಗೆ ಅಕ್ಷಯ್ ಕುಮಾರ್ 10ನೇ ಸ್ಥಾನ ಪಡೆದಿದ್ದಾರೆ.

ಹಾಲಿವುಡ್ ನಟ ವಾಲ್ಬರ್ಗ್ 435 ಕೋಟಿ ರು. ಗಳಿಕೆಯೊಂದಿಗೆ ಅತಿಹೆಚ್ಚು ಸಂಭಾವನೆ ಪಡೆಯುತ್ತಿರುವ ನಟ ಎನಿಸಿಕೊಂಡಿದ್ದಾರೆ. ಅಗ್ರ ಐವರು ನಟರ ಪಟ್ಟಿಯಲ್ಲಿ ಡ್ವೇನ್ ಜನ್ಸನ್ (2), ವಿನ್ ಡೀಸೆಲ್ (3), ಆಡಮ್ ಸ್ಯಾಂಡ್ಲರ್ (4) ಮತ್ತು ಜಾಕಿ ಚಾನ್ (5)ನೇ ಸ್ಥಾನ ಪಡೆದಿದ್ದಾರೆ.