ಬಾಲಿವುಡ್ ಭಾಯಿಜಾನ್ ಸಲ್ಮಾನ್ ಖಾನ್ ಅಪಾರ ಅಭಿಮಾನಿ  ಬಳಗವನ್ನು ಹೊಂದಿದೆ. ಅಭಿಮಾನಿಗಳ ಪ್ರೀತಿ, ವಿಶ್ವಾಸಕ್ಕೆ ಬೆಲೆ ಕಟ್ಟಲಾಗದು. ಕೆಲವೊಮ್ಮೆ ಅವರು ತೋರಿಸುವ ಪ್ರೀತಿ ನೋಡಿದಾಗ ಹೃದಯ ತುಂಬಿ ಬರುವುದು ಖಂಡಿತ! 

ಸಲ್ಮಾನ್ ಖಾನ್ ವಿಕಲಚೇತನ ಅಭಿಮಾನಿಯೊಬ್ಬರು ಕಾಲಿನಿಂದ ಸಲ್ಲುಭಾಯ್ ಚಿತ್ರವನ್ನು ಬಿಡಿಸಿದ್ದಾರೆ. ಹಲೋ ಬ್ರದರ್ ಸಿನಿಮಾದ ’ತೆರಿ ಚುನರಿಯಾ.....’ ಸಿನಿಮಾದ ಹಾಡು ಹಿನ್ನಲೆಯಲ್ಲಿ ಕೇಳಿ ಬರುತ್ತದೆ. ಚಿತ್ರ ಬಿಡಿಸುವ ವಿಡಿಯೋವನ್ನು ಶೇರ್ ಮಾಡಿದ್ದಾರೆ. ‘ದೇವರು ನಿಮಗೆ ಒಳ್ಳೆಯದನ್ನು ಮಾಡಲಿ... ನಿಮ್ಮ ಪ್ರೀತಿಗೆ ಋಣಿ.... ಲವ್ ಯೂ ಎಂದು ಬರೆದಿದ್ದಾರೆ. 

 

ಸಲ್ಲು ಭಾಯ್ ಸದ್ಯ ದಬಾಂಗ್-3 ನಲ್ಲಿ ಬ್ಯುಸಿಯಾಗಿದ್ದಾರೆ. ಸೋನಾಕ್ಷಿ ಸಿನ್ಹಾ, ಕಿಚ್ಚ ಸುದೀಪ್ ಈ ಸಿನಿಮಾದಲ್ಲಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈಗಾಗಲೇ ಶೇ. 60 ರಷ್ಟು ಶೂಟಿಂಗ್ ಮುಗಿದಿದ್ದು ಸೆಪ್ಟೆಂಬರ್ ಅಂತ್ಯದ ವೇಳೆಗೆ ತೆರೆಗೆ ಬರುವ ಸಾಧ್ಯತೆಯಿದೆ.