ಇಲ್ಲಿ ಅನುಷ್ಕಾ ಶರ್ಮಾಳ ಪಾತ್ರದ ಹೆಸರು ‘ಅಲಿಝೇ’! ಈ ‘ಅಲಿಝೇ’ ಎನ್ನುವ ಹೆಸರು ಸಲ್ಮಾನ್‌ಖಾನ್ ಅವರ ಸೊಸೆಯ ಹೆಸರು! ಸಲ್ಲುವಿನ ದೊಡ್ಡಕ್ಕನ ಮಗಳು ಅಲಿಝೇ ಅಗ್ನಿಹೋತ್ರಿಯನ್ನು ನೆನಪಿಸಿಕೊಂಡೇ ಈ ಪಾತ್ರಕ್ಕೆ ಹೆಸರಿಡಲಾಗಿದೆ ಎಂದಿದ್ದಾರೆ
ಮುಂಬೈ(ಅ.25): ಬಾಲಿವುಡ್ನ ಬೇರ್ಪಟ್ಟ ಪ್ರೇಮಿಗಳಲ್ಲಿ ಐಶ್ವರ್ಯಾ ರೈ- ಸಲ್ಮಾನ್ಖಾನ್ ನಂ.1 ಜೋಡಿ. ಇವರಿಬ್ಬರೂ ಪ್ರೀತಿಸುತ್ತಿದ್ದಾಗ ಇವರನ್ನು ಸಂಜಯ್ ಲೀಲಾ ಬನ್ಸಾಲಿ ‘ಹಮ್ ದಿಲ್ ದೇ ಚುಕೆ ಸನಮ್’ನಲ್ಲಿ ಒಟ್ಟಿಗೆ ತೋರಿಸಿದ್ದರು. ಬಳಿಕ ಇಬ್ಬರೂ ಒಟ್ಟಿಗೆ ನಟಿಸಲೇ ಇಲ್ಲ.
ಆದರೆ, ಈಗ ಐಶು ನಟಿಸಿರುವ ‘ಏ ದಿಲ್ ಹೈ ಮುಷ್ಕಿಲ್’ ಚಿತ್ರದಲ್ಲಿ ಸಲ್ಮಾನ್ಖಾನ್ ಕನೆಕ್ಷನ್ ಕೊಟ್ಟಿದ್ದಾರೆ ಕರಣ್ ಜೋಹಾರ್. ಇಲ್ಲಿ ಅನುಷ್ಕಾ ಶರ್ಮಾಳ ಪಾತ್ರದ ಹೆಸರು ‘ಅಲಿಝೇ’! ಈ ‘ಅಲಿಝೇ’ ಎನ್ನುವ ಹೆಸರು ಸಲ್ಮಾನ್ಖಾನ್ ಅವರ ಸೊಸೆಯ ಹೆಸರು! ಸಲ್ಲುವಿನ ದೊಡ್ಡಕ್ಕನ ಮಗಳು ಅಲಿಝೇ ಅಗ್ನಿಹೋತ್ರಿಯನ್ನು ನೆನಪಿಸಿಕೊಂಡೇ ಈ ಪಾತ್ರಕ್ಕೆ ಹೆಸರಿಡಲಾಗಿದೆ ಎಂದಿದ್ದಾರೆ ಕರಣ್. ಒಟ್ಟಿನಲ್ಲಿ ಐಶು ಚಿತ್ರದಲ್ಲಿ ಸಲ್ಲುವಿನ ನೆರಳು ಬಂದಹಾಗಾಯ್ತು!
