ಸೋನಮ್ ಕಪೂರ್ ಸಹೋದರ ಹರ್ಷವರ್ಧನ್ ಕಪೂರ್ ಜೊತೆ ಸ್ಕ್ರೀನ್ ಶೇರ್ ಮಾಡಿರುವ ಸೈಯಾಮಿ ಖೇರ್

ಮುಂಬೈ(ಅ.01): ಕ್ಯಾಸ್ಟಿಂಗ್ ಕೌಚ್ ಕುರೊತಾಗಿ ಬಾಲಿವುಡ್`ನಲ್ಲಿ ಆಗಿಂದ್ದಾಗ್ಗೆ ಆರೋಪಗಳು ಬಂದುಹೋಗುತ್ತವೆ. ಈ ಹಿಂದೆಯೂ ಹಲವು ನಟಿಯರು ಸಿನಿಮಾ ಚಾನ್ಸ್ ಸಿಗಬೇಕಾದರೆ ಮಂಚ ಹತ್ತಬೇಕೆಂಬ ಆರೋಪವನ್ನ ಮಾಡಿದ್ದರು. ಇದೀಗ, ಬಾಲಿವುಡ್`ಗೆ ಎಂಟ್ರಿ ಕೊಡುತ್ತಿರುವ ನಟಿ, ಸೋನಮ್ ಕಪೂರ್ ಸಹೋದರ ಹರ್ಷವರ್ಧನ್ ಕಪೂರ್ ಜೊತೆ ಸ್ಕ್ರೀನ್ ಶೇರ್ ಮಾಡಿರುವ ಸೈಯಾಮಿ ಖೇರ್ ಕ್ಯಾಸ್ಟಿಂಗ್ ಕೌಚ್ ಅನುಭವವನ್ನ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆಂದು ಬಾಲಿವುಡ್ ಲೈಫ್ ವರದಿ ಮಾಡಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಆರಂಭಿಕ ದಿನಗಳಲ್ಲಿ ಸಿನಿಮಾಗಾಗಿ ಆಡಿಶನ್`ಗಳಿಗೆ ಅಲೆಯುತ್ತಿದ್ದೆ. ಅಲ್ಲಿ ನಮ್ಮ ಜೊತೆ ಮಾತನಾಡುತ್ತಿದ್ದ ನಿರ್ದೇಶಕರು ಕ್ಯಾಸ್ಟಿಂಗ್ ಕೌಚ್ ಪ್ರಸ್ತಾಪ ಇಡುತ್ತಿದ್ದರು. ಹಲವು ಬಾರಿ ನನಗೆ ಈ ರೀತಿಯ ಅನುಭವವಾಗಿದೆ ಎಂದು ಸೈಯಾಮಿ ಹೇಳಿದ್ಧಾರೆ.