ಸೈಫ್ ಆಲಿ ಖಾನ್ ಮತ್ತು ಕರೀನಾ ಕಪೂರ್ ಪುತ್ರ ತೈಮೂರ್ ಅಲಿ ಖಾನ್ ಪ್ರಥಮ ಹುಟ್ಟುಹಬ್ಬವನ್ನು ಆಪ್ತರೊಂದಿಗೆ ಆಚರಿಸಿಕೊಂಡಿದೆ. ಆದರೆ, ಈ ಕಾರ್ಯಕ್ರಮಕ್ಕೆ ಸೈಫ್ ಆಪ್ತೆಯೊಬ್ಬರು ಮಾತ್ರ ಗೈರಾಗಿದ್ದಾರು. ಯಾರು ಗೊತ್ತಾ?
ಮುಂಬಯಿ: ಸೈಫ್ ಆಲಿ ಖಾನ್ ಮತ್ತು ಕರೀನಾ ಕಪೂರ್ ಪುತ್ರ ತೈಮೂರ್ ಅಲಿ ಖಾನ್ ಪ್ರಥಮ ಹುಟ್ಟುಹಬ್ಬವನ್ನು ಆಪ್ತರೊಂದಿಗೆ ಆಚರಿಸಿಕೊಂಡಿದೆ. ಆದರೆ, ಈ ಕಾರ್ಯಕ್ರಮಕ್ಕೆ ಸೈಫ್ ಆಪ್ತೆಯೊಬ್ಬರು ಮಾತ್ರ ಗೈರಾಗಿದ್ದಾರು. ಯಾರು ಗೊತ್ತಾ?
ಬೇರೆ ಯಾರೂ ಅಲ್ಲ, ಸೈಫ್ ಆಲಿ ಖಾನ್ ತಂಗಿ ಸೋಹಾ ಆಲಿ ಖಾನ್.
ಪುಸ್ತಕದ ಪ್ರಚಾರ ಕಾರ್ಯಕ್ರಮದಲ್ಲಿ ಬ್ಯುಸಿಯಾಗಿರುವ ಸೋನಾಗೆ ತನ್ನ ಅಳಿಯನ ಹುಟ್ಟುಹಬ್ಬದಲ್ಲಿ ಪಾಲ್ಗೊಳ್ಳಲು ಸಾಧ್ಯವಾಗಿಲ್ಲ. ಸೋಹಾಳೊಂದಿಗೆ ಆಕೆಯ ಮೂರು ತಿಂಗಳ ಮಗಳೂ ಇನಾಯಾ ಸಹ ತೈಮೂರ್‌ನೊಂದಿಗೆ ಇರಲಿಲ್ಲ.
ತೈಮೂರ್ ಹಾಗೂ ಇನಾಯಾಳ ಒಡನಾಟದ ಬಗ್ಗೆ ಕೇಳಿದ ಪ್ರಶ್ನೆಯೊಂದಕ್ಕೆ ಇತ್ತೀಚೆಗೆ ಸಂದರ್ಶನವೊಂದರಲ್ಲಿ ಸೋಹಾ, ಇಬ್ಬರೂ ಭೇಟಿಯಾಗಿದ್ದಾರೆ. ಆದರಿನ್ನೂ ಜತೆಯಾಗಿ ಆಟವಾಡುವಷ್ಟು ದೊಡ್ಡವರಾಗಿಲ್ಲ, ಎಂದಿದ್ದರು.
