ಮುಂಬೈ(ಸೆ.28): ಕರೀನಾ ಕಪೂರ್ ತಾಯಿಯಾಗ್ತಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ. ವಿಶೇಷ ಅಂದರೆ ಕೂಸು ಹುಟ್ಟುವ ಮುನ್ನವೇ ಸೈಫ್- ಕರೀನಾ ಮಗುವಿಗೆ ಹೆಸರನ್ನು ಇಟ್ಟಿದ್ದಾರೆ. 

Add Asianetnews Kannada as a Preferred SourcegooglePreferred

ಸೈಫ್ ಅಲಿಖಾನ್ ಮಗು ಹುಟ್ಟುವ ಮೊದಲೇ ತಮ್ಮ ಮಗುವಿಗೆ ಒಂದು ಕ್ಯೂಟ್ ಆಗಿರುವ ಹೆಸರನ್ನು ಆಯ್ಕೆ ಮಾಡಿದ್ದಾರೆ .

ಈ ಬಗ್ಗೆ ಮಾತಾಡಿರುವ ಕರೀನಾ, ಸೈಫ್ ಗೆ ತಮ್ಮ ಬೇಬಿ ಬಂಪ್ ಲುಕ್ ತುಂಬಾನೇ ಇಷ್ಟ. ಜೊತೆಗೆ ಸೈಫ್ ಅವರಿಗೆ ‘ಸೈಫೀನಾ’ ಅನ್ನೋ ಹೆಸರು ಇಷ್ಟ ಎಂದಿದ್ದಾರೆ. 

ಹಾಗಾಗಿ ಸೈಫ್ ಹುಟ್ಟುವ ಮಗುವಿಗೆ ಇದೇ ಹೆಸರನ್ನು ಇಡಲು ಬಯಸಿದ್ದಾರೆ ಅಂತ ಬೇಬೋ ಹೇಳಿದ್ದಾರೆ. ಡಿಸೆಂಬರ್ ಹೊತ್ತಿಗೆ ಕರೀನಾ ಮಗುವಿಗೆ ಜನ್ಮ ನೀಡಲಿದ್ದಾರೆ.