ಮಕ್ಕಳ ದಿನಾಚರಣೆ ಪ್ರಯುಕ್ತ ಬಾಲಿವುಡ್‌ ನಟ ಸೈಫ್‌ ಅಲಿಖಾನ್‌ ತನ್ನ ಮುದ್ದು ಮಗ ತೈಮೂರ್‌ ಖಾನ್‌ಗೆ ದುಬಾರಿ ಉಡುಗೊರೆಯೊಂದನ್ನು ನೀಡಿದ್ದಾರೆ.  ನಟ ಸೈಫ್ ಆಲಿಖಾನ್ ಹಾಗೂ ಪತ್ನಿ ನಟಿ ಕರೀನಾ ಅವರ ಪ್ರೀತಿಯ ಪುತ್ರ ತೈಮುರ್ ಮುಂದಿನ ತಿಂಗಳು ಡಿಸೆಂಬರ್‌ನಲ್ಲಿ ತನ್ನ ಮೊದಲ ಬರ್ತ್‌ ಡೇ ಆಚರಿಸಿಕೊಳ್ಳಲಿದ್ದಾನೆ .

ಮುಂಬೈ (ನ.15): ಮಕ್ಕಳ ದಿನಾಚರಣೆ ಪ್ರಯುಕ್ತ ಬಾಲಿವುಡ್‌ ನಟ ಸೈಫ್‌ ಅಲಿಖಾನ್‌ ತನ್ನ ಮುದ್ದು ಮಗ ತೈಮೂರ್‌ ಖಾನ್‌ಗೆ ದುಬಾರಿ ಉಡುಗೊರೆಯೊಂದನ್ನು ನೀಡಿದ್ದಾರೆ. ನಟ ಸೈಫ್ ಆಲಿಖಾನ್ ಹಾಗೂ ಪತ್ನಿ ನಟಿ ಕರೀನಾ ಅವರ ಪ್ರೀತಿಯ ಪುತ್ರ ತೈಮುರ್ ಮುಂದಿನ ತಿಂಗಳು ಡಿಸೆಂಬರ್‌ನಲ್ಲಿ ತನ್ನ ಮೊದಲ ಬರ್ತ್‌ ಡೇ ಆಚರಿಸಿಕೊಳ್ಳಲಿದ್ದಾನೆ. ಆತನ ಹುಟ್ಟುಹಬ್ಬಕ್ಕೆ ಇನ್ನೂ ಒಂದು ತಿಂಗಳು ಬಾಕಿ ಇರುವಾಗಲೇ ತನ್ನ ತಂದೆಯಿಂದ 1.30 ಕೋಟಿ ಮೌಲ್ಯದ ಗಿಫ್ಟ್‌ವೊಂದನ್ನು ಪಡೆದಿದ್ದಾನೆ. ಅಂದಹಾಗೆ ಇದು ಬರ್ತ್‌ ಡೇ ಗಿಫ್ಟ್‌ ಅಲ್ಲ. ಬದಲಾಗಿ ಚಿಲ್ಡ್ರನ್ಸ್ ಡೇ ಸ್ಪೆಷಲ್ ಗಿಫ್ಟ್‌.

1.30 ಕೋಟಿ ರೂಪಾಯಿ ಮೌಲ್ಯದ ಕೆಂಪು ಬಣ್ಣದ ಜೀಪ್‌ವೊಂದನ್ನು ಖರೀದಿಸಿರುವ ಸೈಫ್‌ ತನ್ನ ಮಗನಿಗೆ ಗಿಫ್ಟ್‌ ನೀಡಿದ್ದಾರೆ. ಸೋಮವಾರ ಈ ಜೀಪ್‌ ಪರ್ಸೇಸ್ ಮಾಡಲು ಬಂದ ಸೈಫ್‌ ಮಾಧ್ಯಮಗಳೊಂದಿಗೆ ಈ ಖುಷಿ ವಿಷಯವನ್ನು ಹಂಚಿಕೊಂಡಿದ್ದಾರೆ. ಈ ಜೀಪ್‌ನಲ್ಲಿ ಮಕ್ಕಳಿಗೋಸ್ಕರ ವಿಶೇಷವಾದ ಸೀಟ್‌ ಅಳವಡಿಸಲಾಗಿದೆ. ಇದು ತುಂಬಾ ಸೇಫ್‌ ಆಗಿದೆ. ಎಲ್ಲದಕ್ಕಿಂತಲೂ ಭದ್ರತೆ ಮುಖ್ಯ. ಆದ್ದರಿಂದ ಈ ಕಾರನ್ನು ಖರೀದಿಸಿದ್ದೇನೆ ಎಂದು ಸೈಫ್‌ ಹೇಳಿದ್ದಾರೆ.