’ಸಾಗುವ ದಾರಿಯಲ್ಲಿ ’ ಏನೇನಿದೆ?

Saguva Dariyalli Kannada Movie Review
Highlights

ಸರಿಯಾದ ಕತೆಯಾಗಲಿ, ಇರುವ ಕತೆಗಾದರೂ ನ್ಯಾಯ ಸಲ್ಲಿಸುವ ಪಾತ್ರಧಾರಿಗಳಾಗಲಿ, ಒಂದು ಸಿನಿಮಾಗೆ ಇರಬೇಕಾದ ಸತ್ವ ಇದ್ಯಾವುದೂ ಇಲ್ಲದೆ ಚಿತ್ರ ಮಾಡುವುದಕ್ಕೆ ಸಾಧ್ಯವೇ ಎನ್ನುವ ಯಕ್ಷ  ಪ್ರಶ್ನೆ ಏನಾದರೂ ಕೇಳುವವರಿಗೆ ‘ಸಾಗುವ ದಾರಿಯಲ್ಲಿ’ ಎನ್ನುವ ಚಿತ್ರವನ್ನು ಉದಾಹರಣೆ ಆಗಿ ಕೊಡಬಹುದು.

ಸರಿಯಾದ ಕತೆಯಾಗಲಿ, ಇರುವ ಕತೆಗಾದರೂ ನ್ಯಾಯ ಸಲ್ಲಿಸುವ ಪಾತ್ರಧಾರಿಗಳಾಗಲಿ, ಒಂದು ಸಿನಿಮಾಗೆ ಇರಬೇಕಾದ ಸತ್ವ ಇದ್ಯಾವುದೂ ಇಲ್ಲದೆ ಚಿತ್ರ ಮಾಡುವುದಕ್ಕೆ ಸಾಧ್ಯವೇ ಎನ್ನುವ ಯಕ್ಷ  ಪ್ರಶ್ನೆ ಏನಾದರೂ ಕೇಳುವವರಿಗೆ ‘ಸಾಗುವ ದಾರಿಯಲ್ಲಿ’ ಎನ್ನುವ ಚಿತ್ರವನ್ನು ಉದಾಹರಣೆ ಆಗಿ ಕೊಡಬಹುದು.

ಒಂದು ನೈಜ ಘಟನೆಯನ್ನೇ ನಂಬಿಕೊಂಡು ಇಡೀ ಸಿನಿಮಾ ಸುತ್ತಿದ್ದಾರೆ ನಿರ್ದೇಶಕ ಶಿಕುಮಾರ್. ಜತೆಗೆ ತಾವೂ ಕೂಡ ಒಂದು ಮುಖ್ಯ ಪಾತ್ರ ಮಾಡಿದ್ದಾರೆ. ಹೀಗಾಗಿ ಎಂದೋ ನೀರಿನಲ್ಲಿ ಮುಳುಗಿ ದುರಂತ ಸಾವು ಕಂಡ ಪ್ರಕರಣವೊಂದನ್ನು ನಂಬಿಕೊಂಡು ಅದಕ್ಕೆ ಗಟ್ಟಿಯಾದ ಚಿತ್ರಕತೆ ಇಲ್ಲದೆ, ಸೂಕ್ತವಾದ ಸಂಭಾಷಣೆಗಳು ಕೂಡ ಇಲ್ಲದೆ, ಇರುವ ಕಲಾವಿದರು ಕೂಡ ಕಾಟಾಚಾರಕ್ಕೆ ಬಂದು ಹೋಗುವಂತೆ ನಟಿಸಿದಂತೆ ಕಾಣುವ ‘ಸಾಗುವ ದಾರಿಯಲ್ಲಿ’ ನೆನಪಿಟ್ಟುಕೊಳ್ಳುವಂತಹುದ್ದೇನು ಇಲ್ಲ. ಹಾಗಂತ ಇಲ್ಲಿ ಕಲಾವಿದರು ಹೊಸಬರಲ್ಲ. ದೇವರಾಜ್, ರಂಗಾಯಣ ರಘು, ಬುಲೆಟ್ ಪ್ರಕಾಶ್, ಸಾಧುಕೋಕಿಲ, ಶರತ್ ಲೋಹಿತಾಶ್ವ, ಸತ್ಯಜಿತ್, ಜೈಜಗದೀಶ್, ಜಹಾಂಗೀರ್, ಅರುಣ ಬಾಲರಾಜ್, ಸುನೇತ್ರ ಪಂಡಿತ್‌ರಂತಹ ಪ್ರಬುದ್ಧ ಪೋಷಕ ಕಲಾವಿದರು ಇದ್ದಾರೆ. ನೋಡಲು ಮುದ್ದಾಗಿ ಕಾಣುವ ನಾಯಕಿ ಪವಿತ್ರಾ ಗೌಡ ಇದ್ದಾರೆ. ಮಾಸ್ ಲುಕ್ ಇರುವ ನಾಯಕ ಅನೂಪ್ ಇದ್ದಾನೆ. ಆದರೂ ಸಿನಿಮಾ ನೋಡುಗನಿಗೆ ತಟ್ಟುವುದೇ ಇಲ್ಲ ಎಂದರೆ ಅದು ನಿರ್ದೇಶಕನ ಪ್ರತಿಭೆಗೆ ಹಿಡಿದ ಕನ್ನಡಿ! ತಾಂತ್ರಿಕವಾಗಿಯೂ ಸಿನಿಮಾ ತೀರಾ ಸವಕಲು.

ಕ್ಯಾಮೆರಾ, ಸಂಗೀತ, ಹಾಡು ಎಲ್ಲವೂ ಅಷ್ಟಕಷ್ಟೆ. ಆದರೆ, ಒಂದು ಹಾಡಿನಲ್ಲಿ ಮಾತ್ರ ಛಾಯಾಗ್ರಾಹಕ ತಾನು ಇರುವುದನ್ನು ತೋರಿಸುತ್ತಾರೆ. ಅನೂಪ್, ಫೈಟ್ ಚೆನ್ನಾಗಿ ಮಾಡುತ್ತಾರೆ. ಬುಲೆಟ್  ಪ್ರಕಾಶ್, ಸಾಧು ಕೋಕಿಲ, ರಂಗಾಯಣ ರಘು ಆಗಾಗ ಬಂದು ನಗಿಸುವುದಕ್ಕೆ ತುಂಬಾ ಶ್ರಮ ಹಾಕುತ್ತಾರೆ.  

loader