ಸ್ಯಾಂಡಲ್ ವುಡ್ ಸ್ಟಾರ್ ನಟರೊಂದಿಗೆ ಸಾಮಾಜಿಕ ಕಳಕಳಿ ಕಾರ್ಯಕ್ರಮ ಮಾಡುತ್ತಿದೆ ಉದಯ ಟಿವಿ. ಸಿನಿ ತಾರೆಯರನ್ನು ಕರೆದುಕೊಂಡು ಬಂದು, ಮಾಡುವ ಈ ಕಾರ್ಯಕ್ರಮದಲ್ಲಿ ಪ್ರಜ್ವಲ್ ದೇವರಾಜ್ ಮಾಡಿದ್ದೇನು?

ಶ್ರೀಸಾಮಾನ್ಯನ ಜೀವನ ಅರಿಯಲು, ಅವರಿಗೆ ನೆರವಾಗಲು ಉದಯ ಟಿವಿಯಲ್ಲಿ 'ಸದಾ ನಿಮ್ಮೊಂದಿಗೆ' ಕಾರ್ಯಕ್ರಮ ಬಿತ್ತರಗೊಳ್ಳುತ್ತಿದೆ. ಈಗಾಗಲೇ ರಿಯಲ್ ಸ್ಟಾರ್ ಉಪೇಂದ್ರ, ಧ್ರುವ ಸರ್ಜಾ, ರಶ್ಮಿಕಾ ಮಂದಣ್ಣ, ವಿಜಯ ರಾಘವೇಂದ್ರ, ಶ್ರೀ ಮುರಳಿ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಹೂವು, ಹಣ್ಣು, ಜ್ಯೂಸ್ ಮಾರಿಯಾಗಿದೆ. ಇವರೊಂದಿಗೆ ಇದೀಗ ಸೇರ್ಪಡೆಯಾಗಿದ್ದು ಪ್ರಜ್ವಲ್ ದೇವರಾಜ್.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ಟೀ ವ್ಯಾಪಾರಿ ಸತೀಶ್ ಮಗಳಿಗೆ ಸಹಾಯ ಮಾಡಲಿದ್ದಾರೆ. ಈಕೆಗೆ ಶ್ರವಣ ದೋಷವಿದೆ. ಶಸ್ರ್ತಚಿಕಿತ್ಸೆಗೆ ಹಣದೂಗಿಸಲು ಪ್ರಜ್ವಲ್ ಬಾದಾಮಿ ಹಾಲು ಮಾರಿದ್ದಾರೆ. ಇದರಿಂದ ಬಂದ ಹಣವಲ್ಲದೇ, ವೈಯಕ್ತಿಕವಾಗಿಯೂ ಬಡ ಬಾಲಕಿಗೆ ನೆರವಾಗಿ, ಹೃದಯ ವೈಶಾಲ್ಯತೆ ಮೆರೆದಿದ್ದಾರೆ. ಹಾಲು ಮಾರಿ ಎಷ್ಟು ಹಣ ಸಂಗ್ರಹವಾಯಿತೆಂಬುದನ್ನು ಭಾನುವಾರ ರಾತ್ರಿ ಪ್ರಸಾರವಾಗೋ ಕಾರ್ಯಕ್ರಮದಲ್ಲಿ ನೋಡಬೇಕು.