ಕರ್ನಾಟಕ ಭಾಷಾ ವೈವಿಧ್ಯತೆ ಇರುವ ರಾಜ್ಯ. ಒಂದೊಂದು ಕಡೆ ಒಂದೊಂದು ಗ್ರಾಮೀಣ ಭಾಷಾ ಸೊಗಡನ್ನು ಕಾಣಬಹುದಾಗಿದೆ. ಹವಿಗನ್ನಡ, ಧಾರಾವಾಡ ಕನ್ನಡ, ಉತ್ತರ ಕರ್ನಾಟಕ ಕನ್ನಡ, ಕುಂದಗನ್ನಡ, ಕುಡ್ಲಗನ್ನಡ ಹೀಗೆ. 

ಕುಂದಗನ್ನಡ ಭಾಷೆ, ಸಂಸ್ಕೃತಿ ಬೇರುಗಳನ್ನು ಗಟ್ಟಿಗೊಳಿಸಲು ಸಮಾನ ಮನಸ್ಕ ಯುವಕರೆಲ್ಲಾ ಸೇರಿ ಪ್ರತಿ ವರ್ಷ ವಿಶ್ವ ಕುಂದಾಪ್ರ ದಿನವನ್ನಾಗಿ ಆಚರಿಸುತ್ತಿದ್ದಾರೆ.  ಆಸಾಡಿ ಅಮಾಸಿ ದಿನದಂದು ವಿಶ್ವ ಕುಂದಾಪುರ ಕನ್ನಡ ದಿನಾಚರಣೆಯನ್ನು ಆಚರಣೆ ಮಾಡಲಾಗುತ್ತದೆ. ಕುಂದಗನ್ನಡ ಭಾಷೆ ಮಾತ್ರವಲ್ಲ ಅದು ಬದುಕು. ಆಗಸ್ಟ್ 1 ಆಷಾಢ ಅಮವಾಸ್ಯೆಯಂದು ಬೆಂಗಳೂರಿನ ವಿಜಯ ನಗರ ಬಂಟರ ಸಂಘದಲ್ಲಿ ವಿಶ್ವ ಕುಂದಾಪ್ರ ದಿನಾಚರಣೆಯನ್ನು ಆಯೋಜಿಸಲಾಗಿತ್ತು. 

ವಿಶ್ವ ಕುಂದಾಪುರ ಕನ್ನಡ ದಿನ ಅಂಗವಾಗಿ ಸಚಿನ್ ಬಸ್ರೂರ್ ರವರು‘ ನಮ್ಮೂರೇ ಚಂದ ’ಎನ್ನುವ ಹಾಡೊಂದು ರಿಲೀಸ್ ಆಗಿದೆ. ಈ ಹಾಡು ಯುಟ್ಯೂಬ್ ನಲ್ಲಿ ಸದ್ದು ಮಾಡುತ್ತಿದೆ. ಪಲ್ಲವಿ ಐತಾಳ್, ಪ್ರಮೋದ್ ಮರವಂತೆ ಸಾಹಿತ್ಯ ಬರೆದಿದ್ದಾರೆ. 

 

ಈ ಹಾಡು ಕೇಳುತ್ತಿದ್ದರೆ ನಮ್ಮನ್ನು ಗ್ರಾಮೀಣ ಬದುಕಿಗೆ ಕರೆದೊಯ್ಯುತ್ತದೆ. ಗ್ರಾಮೀಣ ಸಂಸ್ಖರತಿಯನ್ನು ಪರಿಚಯಿಸುತ್ತದೆ.  ಸಚಿನ್ ಬಸ್ರೂರು ಕೆಜಿಎಫ್ ಸಿನಿಮಾ ಸೇರಿದಂತೆ ಕೆಲವು ಸಿನಿಮಾಗಳಲ್ಲಿ ಕೆಲಸ ಮಾಡಿದ್ದಾರೆ. ಇದು ನಮ್ಮೂರು, ಅಮ್ಮ, ನಿಹಾರಿಕಾ ಎನ್ನುವ ಆಲ್ಬಂ ಮಾಡಿದ್ದಾರೆ.