ಬೆಂಗಳೂರು(ಸೆ.22): ದಕ್ಷಿಣ ಭಾರತದ ಖ್ಯಾತ ಹಿನ್ನೆಲೆ ಗಾಯಕಿ ಎಸ್. ಜಾನಕಿ, ತಮ್ಮ ಗಾಯನಲೋಕಕ್ಕೆ ಬ್ರೇಕ್ ಹಾಕಿದ್ದಾರೆ. ಕಳೆದ 60 ವರ್ಷಗಳ ಸುದೀರ್ಘ ಗಾನ ಪ್ರಯಣವನ್ನು ಅಂತ್ಯಗೊಳಿಸಿದ್ದಾರೆ.
ತಮ್ಮ ಕಂಠಕ್ಕೆ ವಯಸ್ಸಾಗಿದೆ, ಹಾಗಾಗಿ ಇನ್ಮುಂದೆ ಯಾವುದೇ ಭಾಷೆಯ ಗೀತೆಗೆ ದನಿಯಾಗೊಲ್ಲ ಎಂದಿದ್ದಾರೆ 78 ವರ್ಷದ ಜಾನಕಿ. ಮಲಯಾಳಂನ ಕಲ್ಪನಾಕಲ್ ಚಿತ್ರಕ್ಕೆ ದನಿಯಾಗಿರುವ ಜಾನಕಿ, ಈ ಚಿತ್ರವೇ ತಮ್ಮ ವೃತ್ತಿಯ ಕೊನೆಯ ಹಾಡು ಎಂದಿದ್ದಾರೆ.
1957ರಲ್ಲಿ ತಮಿಳು ಚಿತ್ರವೊಂದಕ್ಕೆ ಹಾಡುವ ಮೂಲಕ, ಗಾಯನ ವೃತ್ತಿ ಆರಂಭಿಸಿದ ಎಸ್.ಜಾನಕಿ, ಕನ್ನಡ, ತೆಲುಗು, ಮಲಯಾಳಂ, ಹಿಂದಿ ಸೇರಿದಂತೆ ಹಲವು ಭಾಷೆಗಳಲ್ಲಿ ಸುಮಾರು 48 ಸಾವಿರಕ್ಕೂ ಹೆಚ್ಚು ಹಾಡುಗಳನ್ನುಹಾಡಿದ್ದಾರೆ.
