ಮಾಜಿ ವಿಶ್ವ ಸುಂದರಿ, ನೀಲಿ ಕಂಗಳ ಚೆಲುವೆ ಐಶ್ವರ್ಯ ರೈ ಬಚ್ಚನ್‌ ದುಬಾರಿ ಗೌನ್‌ ತೊಟ್ಟು ಸಖತ್‌ ಸುದ್ದಿಯಾಗಿದ್ದಾರೆ.
ಮುಂಬೈ(ಡಿ.10): ಸಿನಿಮಾ ಸೆಲೆಬ್ರಿಟಿಗಳು ಫ್ಯಾಶನ್ಗೆ ತುಂಬಾನೇ ಒತ್ತು ಕೊಡುತ್ತಾರೆ ಎನ್ನುವುದಕ್ಕೆ ಇಲ್ಲೊಂದು ತಾಜಾ ಉದಾಹರಣೆ ಇದೆ. ಮಾಜಿ ವಿಶ್ವ ಸುಂದರಿ, ನೀಲಿ ಕಂಗಳ ಚೆಲುವೆ ಐಶ್ವರ್ಯ ರೈ ಬಚ್ಚನ್ ದುಬಾರಿ ಗೌನ್ ತೊಟ್ಟು ಸಖತ್ ಸುದ್ದಿಯಾಗಿದ್ದಾರೆ.
ಅಷ್ಟಕ್ಕೂ ಈ ಗೌನ್ ಬೆಲೆ ಎಷ್ಟು ಗೊತ್ತಾ? ಬರೋಬ್ಬರಿ 3,73,905 ರೂಪಾಯಿ. ಅಂಬಾನಿ ಕುಟುಂಬದಿಂದ ಆಯೋಜಿಸಲಾಗಿದ್ದ ಅದ್ಧೂರಿ ಡಿನ್ನರ್ ಪಾರ್ಟಿಯಲ್ಲಿ ಐಶ್ ಬಂಗಾರದಲ್ಲಿ ಅದ್ದಿದ ಗೊಂಬೆಯಂತೆ ಕಂಗೊಳಿಸಿದ್ರು.
ಇನ್ನು ಹಳದಿ ಬಣ್ಣ ಮಿಶ್ರಿತ ಈ ಮನಮೋಹಕ ಗೌನನ್ನು ಡಿಸೈನ್ ಮಾಡಿದ್ದು ಆಸ್ತಾ ಶರ್ಮಾ. ಬರೀ ಡಿನ್ನರ್ ಪಾರ್ಟಿಗೆ ಐಶ್ ಇಷ್ಟೊಂದು ದುಬಾರಿ ಬಟ್ಟೆ ತೊಟ್ಟಿರುವುದು ಬಾಲಿವುಡ್ ಅಂಗಳದಲ್ಲಿ ಸಿಕ್ಕಾಪಟ್ಟೆ ಚರ್ಚೆಗೆ ಕಾರಣವಾಗಿದೆ.
