ನಿರ್ದೇಶಕ ರಿಷಭ್‌ ಶೆಟ್ಟಿತುಂಬಾ ಖುಷಿಯಲ್ಲಿದ್ದಾರೆ. ಅದಕ್ಕೆ ಎರಡು ಕಾರಣ. ಒಂದು ಅವರು ನಿರ್ದೇಶಿಸಿದ ‘ಕಿರಿಕ್‌ ಪಾರ್ಟಿ' ಸಿನಿಮಾ ಸೂಪರ್‌ ಡ್ಯೂಪರ್‌ ಹಿಟ್‌ ಆಗಿದ್ದು. ಇನ್ನೊಂದು ಅವರು ಮೆಚ್ಚಿದ ಹುಡುಗಿಯ ಜೊತೆ ಮದುವೆ ಆಗಿದ್ದು. ರಿಷಭ್‌ ಇತ್ತೀಚೆಗೆ ಪ್ರಗತಿ ಶೆಟ್ಟಿಯವರ ಜೊತೆ ಮದುವೆಯಾದ ಸಂದರ್ಭದಲ್ಲಿ ತಮ್ಮದು ಅರೇಂಜ್‌ ಮ್ಯಾರೇಜ್‌ ಎಂದೇ ಹೇಳಿಕೊಂಡಿದ್ದರು. ಆದರೆ ಆ ಅರೇಂಜ್‌ ಮ್ಯಾರೇಜ್‌ ಹಿಂದೆಯೂ ಒಂದು ಲವ್‌ಸ್ಟೋರಿ ಇದೆ ಅನ್ನುವುದು ಗೊತ್ತಾಗಿದ್ದು ರಕ್ಷಿತ್‌ ಶೆಟ್ಟಿ ಹೇಳಿದಾಗಲೇ.
ನಿರ್ದೇಶಕ ರಿಷಭ್ ಶೆಟ್ಟಿತುಂಬಾ ಖುಷಿಯಲ್ಲಿದ್ದಾರೆ. ಅದಕ್ಕೆ ಎರಡು ಕಾರಣ. ಒಂದು ಅವರು ನಿರ್ದೇಶಿಸಿದ ‘ಕಿರಿಕ್ ಪಾರ್ಟಿ' ಸಿನಿಮಾ ಸೂಪರ್ ಡ್ಯೂಪರ್ ಹಿಟ್ ಆಗಿದ್ದು. ಇನ್ನೊಂದು ಅವರು ಮೆಚ್ಚಿದ ಹುಡುಗಿಯ ಜೊತೆ ಮದುವೆ ಆಗಿದ್ದು. ರಿಷಭ್ ಇತ್ತೀಚೆಗೆ ಪ್ರಗತಿ ಶೆಟ್ಟಿಯವರ ಜೊತೆ ಮದುವೆಯಾದ ಸಂದರ್ಭದಲ್ಲಿ ತಮ್ಮದು ಅರೇಂಜ್ ಮ್ಯಾರೇಜ್ ಎಂದೇ ಹೇಳಿಕೊಂಡಿದ್ದರು. ಆದರೆ ಆ ಅರೇಂಜ್ ಮ್ಯಾರೇಜ್ ಹಿಂದೆಯೂ ಒಂದು ಲವ್ಸ್ಟೋರಿ ಇದೆ ಅನ್ನುವುದು ಗೊತ್ತಾಗಿದ್ದು ರಕ್ಷಿತ್ ಶೆಟ್ಟಿ ಹೇಳಿದಾಗಲೇ.
ಇತ್ತೀಚೆಗೆ ನಡೆದ ‘ಕಿರಿಕ್ ಪಾರ್ಟಿ' 150ನೇ ದಿನದ ಸಂಭ್ರಮಾಚರಣೆಯಲ್ಲಿ ಅಕುಲ್ ಬಾಲಾಜಿಯವರು ರಿಷಭ್ ಮತ್ತು ಪ್ರಗತಿಯವರನ್ನು ನಿಲ್ಲಿಸಿ ಲವ್ಸ್ಟೋರಿ ಹೇಳುವಂತೆ ಕಾಲೆಳೆಯುತ್ತಿದ್ದರು. ಆದರೆ ರಿಷಭ್ ಮತ್ತು ಪ್ರಗತಿ ತಮ್ಮದು ಅರೇಂಜ್ ಮ್ಯಾರೇಜು ಅಂತಲೇ ವಾದಿಸುತ್ತಿರುವಾಗ ಫಟಾ ಪೋಸ್ಟರ್ ನಿಕ್ಲಾ ಹೀರೋ ಎನ್ನುತ್ತಾ ಎಂಟ್ರಿ ಕೊಟ್ಟರಕ್ಷಿತ್ ಶೆಟ್ಟಿಹೇಳಿದ ಲವ್ ಸ್ಟೋರಿ ಹೀಗಿದೆ.
ವರದಿ: ಕನ್ನಡಪ್ರಭ, ಸಿನಿವಾರ್ತೆ
