ರಿಷಬ್ ಶೆಟ್ಟಿ ತಮ್ಮ ಹುಡುಗಿಗೆ ಮೊದಲ ಬಾರಿ ಪ್ರಪೋಸ್ ಮಾಡಿದ್ದು ಹೇಗೆ ಗೊತ್ತಾ?

Rishab Shetty Propose to his Wife
Highlights

ನನ್ನ ರಿಷಬ್ ಮೊದಲ ಭೇಟಿಯಾಗಿದ್ದು ‘ರಿಕ್ಕಿ’ ಚಿತ್ರದ ಪ್ರೀಮಿಯರ್‌ನಲ್ಲಿ. ಅದಕ್ಕೂ ಮೊದಲು ಫೇಸ್‌’ಬುಕ್‌’ನಲ್ಲಿ ಫ್ರೆಂಡ್ಸ್‌ಗಳಾಗಿದ್ದೆವು. ಪ್ರೀಮಿಯರ್  ಶೋನಲ್ಲಿ ರಿಷಬ್ ಬಂದು ನನ್ನನ್ನು ಮಾತನಾಡಿಸಿದರು. ನಾನೂ ಮಾತನಾಡಿದೆ. ನಂತರ ನನ್ನ ಬಗ್ಗೆ ಫೇಸ್‌’ಬುಕ್’ನಲ್ಲಿ ಹುಡುಕಿ ತಿಳಿದುಕೊಂಡ ರಿಷಬ್ ನನ್ನನ್ನು ಮದುವೆಯಾಗುವುದಾಗಿ ಮನೆಯವರಿಗೇ ಪ್ರಪೋಸಲ್ ಕಳುಹಿಸಿದರು.ನನಗೂ ಮನೆಯಲ್ಲಿ  ಮದುವೆ ಮಾಡಬೇಕು ಎಂದುಕೊಂಡಿದ್ದರಿಂದ ಒಪ್ಪಿದರು.

ಬೆಂಗಳೂರು (ಫೆ.14): ನನ್ನ ರಿಷಬ್ ಮೊದಲ ಭೇಟಿಯಾಗಿದ್ದು ‘ರಿಕ್ಕಿ’ ಚಿತ್ರದ ಪ್ರೀಮಿಯರ್‌ನಲ್ಲಿ. ಅದಕ್ಕೂ ಮೊದಲು ಫೇಸ್‌’ಬುಕ್‌’ನಲ್ಲಿ ಫ್ರೆಂಡ್ಸ್‌ಗಳಾಗಿದ್ದೆವು. ಪ್ರೀಮಿಯರ್  ಶೋನಲ್ಲಿ ರಿಷಬ್ ಬಂದು ನನ್ನನ್ನು ಮಾತನಾಡಿಸಿದರು. ನಾನೂ ಮಾತನಾಡಿದೆ. ನಂತರ ನನ್ನ ಬಗ್ಗೆ ಫೇಸ್‌’ಬುಕ್’ನಲ್ಲಿ ಹುಡುಕಿ ತಿಳಿದುಕೊಂಡ ರಿಷಬ್ ನನ್ನನ್ನು ಮದುವೆಯಾಗುವುದಾಗಿ ಮನೆಯವರಿಗೇ ಪ್ರಪೋಸಲ್ ಕಳುಹಿಸಿದರು.ನನಗೂ ಮನೆಯಲ್ಲಿ ಮದುವೆ ಮಾಡಬೇಕು ಎಂದುಕೊಂಡಿದ್ದರಿಂದ ಒಪ್ಪಿದರು.

ನನ್ನನ್ನು ನೋಡಿ ಇಷ್ಟಪಟ್ಟಿದ್ದ ರಿಷಬ್ ಮೊದಲು ಅವರ ಅಕ್ಕನಿಗೆ ತಿಳಿಸಿದರು. ನಂತರ ಅವರೇ  ನನಗೆ ಮೆಸೇಜ್ ಮಾಡಿ ಪ್ರೀತಿ ಹೇಳಿಕೊಂಡಿದ್ದರು. ನನ್ನ ಮನೆಯಲ್ಲಿ ಒಪ್ಪಿದ್ದರಿಂದ ನಾನೂ ಒಪ್ಪಿಕೊಂಡೆ. ಮೊದಲ ಬಾರಿಗೆ ಇಬ್ಬರೂ ಕಾಫಿ ಡೇನಲ್ಲಿ ಭೇಟಿಯಾದೆವು. ಆ ಕ್ಷಣವನ್ನಂತೂ ಮರೆಯುವ ಹಾಗೇ ಇಲ್ಲ. ನಂತರ ರಾಸ್ತಾ, ಏರ್‌ಪೋರ್ಟ್ ರೋಡ್ ಮೊದಲಾದ ಕಡೆಗೆ  ಲಾಂಗ್ ಡ್ರೈವ್ ಹೋಗುತ್ತಿದ್ದ ನೆನಪು ಇನ್ನೂ ಹಸಿರಾಗಿಯೇ ಇದೆ.

ಜನವರಿ 23 ಕ್ಕೆ ನಮ್ಮ ಪ್ರೀತಿಗೆ ಎರಡು ವರ್ಷ. ಪ್ರಪೋಸ್ ಮಾಡಿದ ನಂತರ ಮದುವೆಗೆ ಆರು ತಿಂಗಳು  ಗ್ಯಾಪ್ ಇತ್ತು. ಆ ಗ್ಯಾಪ್‌ನಲ್ಲಿ ರಿಷಬ್ ‘ಕಿರಿಕ್ ಪಾರ್ಟಿ’ ಚಿತ್ರದ ಶೂಟಿಂಗ್‌ನಲ್ಲಿ ಬ್ಯುಸಿ ಇದ್ದರೆ, ನಾನು ನನ್ನ ಕೆಲಸದಲ್ಲಿ ಬ್ಯುಸಿ ಇರುತ್ತಿದ್ದೆ. ಆದರೂ ಕೂಡ ಬ್ರೇಕ್ ಫಾಸ್ಟ್‌'ಗೆ ಸಿಗುತ್ತಿದ್ದೆವು. ರಿಷಬ್ ಔಟ್‌ಡೋರ್ ಶೂಟಿಂಗ್ ಹೋದಾಗ ಭೇಟಿ ಸಾಧ್ಯವಾಗುತ್ತಿರಲಿಲ್ಲ. ಈಗ ನಾನು ಕೆಲಸ ಬಿಟ್ಟು ಸಿನಿಮಾ ಕ್ಷೇತ್ರದಲ್ಲೇ ತೊಡಗಿಸಿಕೊಂಡಿರುವುದರಿಂದ ಇಬ್ಬರಿಗೂ ಜೊತೆಗೆ ಇರಲು ಹೆಚ್ಚು ಸಮಯ
ಸಿಗುತ್ತದೆ. ಈಗ ಯಾವುದೇ ಹುಡುಗ ತನ್ನ ಪ್ರೀತಿಯನ್ನು ಹೇಳಿಕೊಳ್ಳುವುದಿದ್ದರೆ ಅದು ರಿಷಬ್ ರೀತಿಯಲ್ಲಿ ಮನೆಯವರ ಮೂಲಕವೇ ಹೇಳಿಕೊಂಡರೆ ಚೆನ್ನಾಗಿರುತ್ತದೆ. ಯಾಕೆಂದರೆ ಹೆಚ್ಚಿನ ಪ್ರೀತಿಗಳಲ್ಲಿ  ಹುಡುಗಿ ಒಪ್ಪಿರುತ್ತಾಳೆ. ಆದರೆ ಅಡ್ಡ ಬರುವುದು ಅವರ ಮನೆಯವರೇ ಆಗಿರುತ್ತಾರೆ. ಹಾಗಾಗಿ ಹುಡುಗರು ಮನೆಯವರಿಗೆ ಹೇಳುವ ಧೈರ್ಯ ಮಾಡಬೇಕು. 

loader