ರಿಷಬ್ ಶೆಟ್ಟಿ ಸಿನಿಮಾವೆಂದರೆ ಅಲ್ಲಿ ಏನೋ ಒಂದು ವಿಶೇಷವಿರುತ್ತದೆ. ಕ್ರೊಯೆಟಿವಿಟಿ ಇರುತ್ತದೆ. ಹೊಸತನ ಇರುತ್ತದೆ ಎಂಬ ಟ್ರೆಂಡನ್ನು ಹುಟ್ಟು ಹಾಕಿದ ಅಪರೂಪದ ನಿರ್ದೇಶಕ. ಸರ್ಕಾರಿ ಶಾಲೆ ಕಾಸರಗೋಡು ಡೈರಕ್ಟರ್ ಕ್ಯಾಪ್ ಬಿಟ್ಟು  ಬೆಲ್ ಬಾಟಂನಲ್ಲಿ ನಾಯಕನಾಗಿ ನಟಿಸಿದ್ದರು. 

ಇದೀಗ ಮತ್ತೆ ನಿರ್ದೇಶನಕ್ಕೆ ವಾಪಸ್ಸಾಗಿದ್ದಾರೆ. ಇವರ ಮುಂದಿನ ಸಿನಿಮಾವನ್ನು ಘೋಷಿಸಿದ್ದಾರೆ. ಜುಲೈ 7 ರಂದು ಹುಟ್ಟುಹಬ್ಬ ಆಚರಿಸಿಕೊಂಡ ರಿಷಬ್ ಹೊಸ ಸಿನಿಮಾ ‘ರುದ್ರ ಪ್ರಯೋಗ’ದ ಪೋಸ್ಟರ್ ರಿಲೀಸ್ ಮಾಡಿದ್ದಾರೆ. 

 

ರುದ್ರಪ್ರಯಾಗ ಟೈಟಲ್ಲೇ ಡಿಫರೆಂಟಾಗಿದೆ. ಇದು ಉತ್ತರ ಖಂಡ ರಾಜ್ಯದ ಒಂದು ಜಿಲ್ಲಾ ಕೇಂದ್ರ. ಅಲಕಾನಂದ ಹಹಾಗೂ ಮಂದಾಕಿನಿ ನದಿಗ ಸಂಗಮ. . ರುದ್ರಪ್ರಯಾಗವು ಹಿಮಾಲಯದ ಪವಿತ್ರನದಿಗಳ ೫ ಸಂಗಮಕ್ಷೇತ್ರಗಳ ಪೈಕಿ ಒಂದು. 

ಇನ್ನೊಂದು ರೀತಿಯಲ್ಲಿ ನೋಡುವುದಾದರೆ  ಸುಮಾರು 425 ಕ್ಕೂ ಹೆಚ್ಚು ಜನರನ್ನು ಕೊಂದಿತ್ತೆಂದು ಹೇಳಲಾದ ರುದ್ರಪ್ರಯಾಗದ ನರಭಕ್ಷಕ ಎಂದೇ ಖ್ಯಾತಿ ಹೊಂದಿದ ಒಂದು ಚಿರತೆಯ ಬಗ್ಗೆ ಇಂಗ್ಲಿಷಿನಲ್ಲಿ ಬಂದ Man Eating Leopard of Rudraprayag ಎಂಬ ರೋಚಕ ಕತೆಯನ್ನು ಅನುವಾದಿಸಿ ರುದ್ರಪ್ರಯಾಗದ ಭಯಾನಕ ನರಭಕ್ಷಕ ಎನ್ನುವ ಹೆಸರಿನ ಪುಸ್ತಕವನ್ನು ಕೆ ಪಿ ಪೂರ್ಣಚಂದ್ರ ತೇಜಸ್ವಿಯವರು ಬರೆದಿದ್ದಾರೆ.  

ಒಟ್ಟಿನಲ್ಲಿ ಈ ಶೀರ್ಷಿಕೆಯ ಹಿಂದಿನ ಕುತೂಹಲವನ್ನು ಎಲ್ಲಿಯೂ ಬಿಟ್ಟುಕೊಟ್ಟಿಲ್ಲ ಶೆಟ್ರು.