ನಟ ಸುಶಾಂತ್‌ ಸಿಂಗ್ ರಜಪೂತ್ ಸಾವಿಗೆ ಸಂತಾಪ ಸೂಚಿಸೋ ನಿರ್ದೇಶಕರೇ ತಮ್ಮೊಂದಿಗೆ ಮಲಗದ ನಟಿಯನ್ನು ಸಿನಿಮಾದಿಂ ಕಿತ್ತಾಕುತ್ತಾರೆ ಎಂದು ಬಾಲಿವುಡ್ ನಟಿ ರಿಚಾ ಚಡ್ಡಾ ಆರೋಪಿಸಿದ್ದಾರೆ. ಮಾನಸಿಕ ನೋವಿಗಿಂತ ಬಾಲಿವುಡ್ ನೆಪೊಟಿಸಂ ಸಾವಿಗೆ ಕಾರಣ ಎಂದು ಅವರು ಒತ್ತಿ ಹೇಳಿದ್ದಾರೆ.

ಜೂನ್ 14ರಂದು ನಟ ಸುಶಾಂತ್ ಆತ್ಮಹತ್ಯೆ ಮಾಡಿಕೊಂಡಿದ್ದರು. ಸಿನಿಮಾ ಇಂಡಸ್ಟ್ರಿ ಒಳಗಿನವರು, ಹೊರಗಿನವರು ಎಂದು ವಿಭಾಗಿಸಲ್ಪಟ್ಟಿದೆ ಎನ್ನಲಾಗ್ತಿದೆ. ಆದರೆ ನನ್ನ ಪ್ರಕಾರ ಬಾಲಿವುಡ್ ಸಿನಿಮಾ ಕ್ಷೇತ್ರ ಹಾಗೂ ಅಲ್ಲಿನ ಸಂಪೂರ್ಣ ವಾತಾವರಣ ಕರುಣೆಯುಳ್ಳವರು ಹಾಗೂ ಕರುಣೆ ಇಲ್ಲದವರೆಂದು ಬದಲಾಗಿದೆ.

ಕನ್ನಡ ನಿರ್ಮಾಪಕ ಸಂದೇಶ್‌ ನಾಗರಾಜ್‌ಗೆ ಕೊರೋನಾ ಪಾಸಿಟಿವ್; ಕ್ವಾರಂಟೈನ್‌ನಲ್ಲಿ ಕುಟುಂಬ!

ಇಂಡಸ್ಟ್ರಿ ಒಂದು ಫುಡ್‌ ಚೈನ್‌ನಂತೆ ಕೆಲಸ ಮಾಡುತ್ತದೆ. ಇಲ್ಲಿ ಜನರು ತಮಗೇನಾದರೂ ಬೇಕೆಂದಾದಾಗ ಕಿಡಿಗೇಡಿಗಳಾಗುತ್ತಾರೆ. ಇಂದು ದುಃಖ ಪ್ರಕಟಿಸುತ್ತಿರುವ ಜನರೇ ತಮ್ಮ ಕೆಳಗಿನವರ ಬಳಿ ಕ್ರೂರವಾಗಿ ನಡೆಉಕೊಂಡಿದ್ದಾರೆ ಎಂದಿದ್ದಾರೆ.

ನನ್ನ ವೃತ್ತಿಜೀವನದ ಆರಂಭಿಕ ಹಂತದಲ್ಲಿ, ಹೊರಗಿನವರು ನನ್ನನ್ನು ಹೆಚ್ಚಾಗಿ ನೋಯಿಸಿದ್ದಾರೆ. ವಿವಿಧ ರೀತಿಯ ಸೂಕ್ಷ್ಮ  ಕೃತ್ಯಗಳಿಂದ ಚೇತರಿಸಿಕೊಳ್ಳಲು ನನ್ನ ಎಲ್ಲ ಮನೋಬಲ ನಾನು ಬಳಸಿದ್ದೇನೆ. ಆದರೆ ಇದು ನನ್ನ ಬಗ್ಗೆ ಅಲ್ಲ. ದುರಂತವೆಂದರೆ ಇಲ್ಲಿರುವ ಪ್ರತಿಯೊಬ್ಬರೂ ಇಂತಹ ನೋವು ಅನುಭವಿಸಿದ್ದಾರೆ ಎಂದಿದ್ದಾರೆ.