‘ನಟ ಸಾರ್ವಭೌಮ’ ಸಿನಿಮಾ ಚಿತ್ರೀಕರಣಕ್ಕೆ ಅಪಸ್ವರ!
ಮಹಾಕೂಟದಲ್ಲಿ ನಟ ಸಾರ್ವಭೌಮ ಚಿತ್ರೀಕರಣಕ್ಕೆ ವಿರೋಧ
ಪುಷ್ಕರಣಿಯಲ್ಲಿ ಚಿತ್ರೀಕರಣಕ್ಕೆ ಸ್ಥಳೀಯರ ವಿರೋಧ
ಭಕ್ತರಲ್ಲಿ ಅಂತರ್ಜಲ ಬತ್ತುವ ಭಯ
ಚಿತ್ರದ ಕ್ಲೈಮಾಕ್ಸ್ ಚಿತ್ರೀಕರಣಕ್ಕೆ ಮುಂದಾದ ಚಿತ್ರತಂಡ
ಬಾಗಲಕೋಟೆ(ಜು.14): ಮಹಾಕೂಟೇಶ್ವರ ಪುಷ್ಕರಣಿ(ಹೊಂಡ)ಯಲ್ಲಿ ನಡೆಯುತ್ತಿರುವ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅಭಿನಯದ ನಟ ಸಾವರ್ವಭೌಮ ಚಿತ್ರೀಕರಣಕ್ಕೆ ಅಪಸ್ವರ ಕೇಳಿ ಬಂದಿದೆ.
ಮಹಾಕೂಟೇಶ್ವರ ಪುಷ್ಕರಣಿ(ಹೊಂಡ]ದಲ್ಲಿ ಸೆಟ್ ಹಾಕಿರುವುದಕ್ಕೆ ಸ್ಥಳೀಯರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಮಹಾಕೂಟದಲ್ಲಿ ಪುಷ್ಕರಣಿ ಇದ್ದು, ಇಲ್ಲಿ ಚಿತ್ರೀಕರಣ ನಡೆಸುವುದರಿಂದ ಅಂತರ್ಜಲಕ್ಕೆ ಧಕ್ಕೆಯಾಗುತ್ತದೆಂದು ಹಲವರು ವಿರೋಧ ವ್ಯಕ್ತಪಡಿಸಿದ್ದಾರೆ.
ಹೊಂಡದಲ್ಲಿ ಡಿಗ್ಗಿಂಗ್ ಮಾಡಿ ತಗ್ಗು ತೋಡಿ ಸೆಟ್ ಹಾಕಲಾಗಿದ್ದು, ಚಿತ್ರತಂಡದ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ. ಉತ್ತರ ಕರ್ನಾಟಕ ಭಾಗದಲ್ಲಿ ದಕ್ಷಿಣ ಕಾಶಿ ಎಂದೇ ಪ್ರಸಿದ್ದವಾಗಿರುವ ಮಹಾಕೂಟದಲ್ಲಿ ಅಂತರ್ಜಲ ಎಂದೂ ಬತ್ತಿಲ್ಲ.
ಆದರೆ ಚಿತ್ರೀಕರಣದಿಂದ ಹೊಂಡದಲ್ಲಿನ ಅಂತರ್ಜಲಕ್ಕೆ ಧಕ್ಕೆಯಾಗುತ್ತದೆಂದು ಭಕ್ತರು ಆತಂಕ ವ್ಯಕ್ತಪಡಿಸಿದ್ದಾರೆ. ಈ ಕಾರಣಕ್ಕೆ ಕೂಡಲೇ ಚಿತ್ರೀಕರಣವನ್ನು ನಿಲ್ಲಿಸಬೇಕೆಂದು ಹೋರಾಟಗಾರರು ಆಗ್ರಹಿಸಿದ್ದಾರೆ.
ಮಹಾಕೂಟದಲ್ಲಿ ಇಂದು ರಾತ್ರಿ ನಟ ಸಾರ್ವಭೌಮ ಚಿತ್ರದ ಕ್ಲೈಮಾಕ್ಸ್ ಚಿತ್ರೀಕರಣಕ್ಕೆ ಚಿತ್ರ ತಂಡ ಮುಂದಾಗಿದೆ.