ಸರ್ಕಾರಿ ನೌಕರಿಗಳಲ್ಲಿ ಬಡ್ತಿ ಮೀಸಲು ನೀಡುವ ವೇಳೆ, ‘ಕೆನೆಪದರ ನೀತಿ’ (ಎಸ್‌ಸಿ/ಎಸ್‌ಟಿ ನೌಕರರಲ್ಲೇ ಶ್ರೀಮಂತರನ್ನು ಮೀಸಲಿಂದ ಹೊರಗಿಡುವುದು) ಅನುಸರಿಸುವ ಅಗತ್ಯವಿಲ್ಲ ಎಂಬ 12 ವರ್ಷ ಹಿಂದಿನ ತನ್ನದೇ ಆದೇಶವನ್ನು ಮರುಪರಿಶೀಲಿಸಲು ಕೇಂದ್ರ ಸರ್ಕಾರ ಒಪ್ಪಿಕೊಂಡಿದೆ. 

ನವದೆಹಲಿ: ಸರ್ಕಾರಿ ನೌಕರಿಗಳಲ್ಲಿ ಬಡ್ತಿ ಮೀಸಲು ನೀಡುವ ವೇಳೆ, ‘ಕೆನೆಪದರ ನೀತಿ’ (ಎಸ್‌ಸಿ/ಎಸ್‌ಟಿ ನೌಕರರಲ್ಲೇ ಶ್ರೀಮಂತರನ್ನು ಮೀಸಲಿಂದ ಹೊರಗಿಡುವುದು) ಅನುಸರಿಸುವ ಅಗತ್ಯವಿಲ್ಲ ಎಂಬ 12 ವರ್ಷ ಹಿಂದಿನ ತನ್ನದೇ ಆದೇಶವನ್ನು ಮರುಪರಿಶೀಲಿಸಲು ಕೇಂದ್ರ ಸರ್ಕಾರ ಒಪ್ಪಿಕೊಂಡಿದೆ. ಈ ಸಂಬಂಧ 7 ಸದಸ್ಯರ ಸಾಂವಿಧಾನಿಕ ಪೀಠ ವಿಚಾರಣೆ ನಡೆಸಲಿದೆ.

ಈ ಕುರಿತ ಅರ್ಜಿಯೊಂದು ಬುಧವಾರ ಮುಖ್ಯ ನ್ಯಾಯಾಧೀಶ ನ್ಯಾ. ದೀಪಕ್‌ ಮಿಶ್ರಾ ಅವರ ತ್ರಿಸದಸ್ಯ ಪೀಠದ ಮುಂದೆ ವಿಚಾರಣೆಗೆ ಬಂದಿತ್ತು. ಆದರೆ ವಿಚಾರಣೆಗೆ ನಿರಾಕರಿಸಿದ ತ್ರಿಸದಸ್ಯ ಪೀಠ, ಇದನ್ನು ಸಪ್ತ ಸದಸ್ಯರ ಸಾಂವಿಧಾನಿಕ ಪೀಠವೇ ಮರುಪರಿಶೀಲಿಸಲಿದೆ ಎಂದು ಹೇಳಿತು.

2006ರಲ್ಲಿ ಎಂ. ನಾಗರಾಜ್‌ ಪ್ರಕರಣದಲ್ಲಿ ತೀರ್ಪು ನೀಡಿದ್ದ ಸುಪ್ರೀಂ ಕೋರ್ಟ್‌, ಎಸ್‌ಸಿ-ಎಸ್‌ಟಿ ಬಡ್ತಿ ಮೀಸಲಿನಲ್ಲಿ ಕೆನೆಪದರ ನೀತಿ ಅನ್ವಯಿಸಲಾಗದು ಎಂದು ತೀರ್ಪು ನೀಡಿತ್ತು. ಆದರೆ ಇದರ ಹೊರತಾಗ್ಯೂ ಕೆಲವು ಹೈಕೋರ್ಟ್‌ಗಳು ವ್ಯತಿರಿಕ್ತ ತೀರ್ಪು ನೀಡಿದ ಕಾರಣ ಗೊಂದಲ ಉಂಟಾಗಿತ್ತು. ಈ ಹಿನ್ನೆಲೆಯಲ್ಲಿ ತೀರ್ಪು ಮರುಪರಿಶೀಲನೆಗೆ ಸುಪ್ರೀಂ ಕೋರ್ಟ್‌ ನಿರ್ಧರಿಸಿದೆ.

ಇತ್ತೀಚೆಗೆ ಕರ್ನಾಟಕ ಸರ್ಕಾರವು ಬಡ್ತಿ ಮೀಸಲನ್ನು ಸಕ್ರಮಗೊಳಿಸಿ ಸುಗ್ರೀವಾಜ್ಞೆ ಹೊರಡಿಸಿತ್ತು.