ಬೆಂಗಳೂರು(ಸೆ.18): ರಿಯಲ್ ಸ್ಟಾರ್ ಉಪೇಂದ್ರಗೆ ಇಂದು ಹುಟ್ಟುಹಬ್ಬದ ಸಂಭ್ರಮ. 48ನೇ ವಸಂತಕ್ಕೆ ಕಾಲಿರಿಸಿರುವ ಉಪ್ಪಿಗೆ ಶುಭಾಷಯ ಕೋರಲು ಉಪ್ಪಿ ಅಭಿಮಾನಿಗಳು ಉಪ್ಪಿ ನಿವಾಸಕ್ಕೆ ಆಗಮಿಸಿದ್ದರು.

Add Asianetnews Kannada as a Preferred SourcegooglePreferred

ಬೆಂಗಳೂರಿನ ಕತ್ರಿಗುಪ್ಪೆಯಲ್ಲಿರುವ ಉಪೇಂದ್ರ ನಿವಾಸದಲ್ಲಿ ಮದ್ಯರಾತ್ರಿ 12 ಗಂಟೆಗೆ ಹೊತ್ತಿಗೆ ಉಪೇಂದ್ರ ಅಭಿಮಾನಿಗಳು ನೂರಾರು ಸಂಖ್ಯೆಯಲ್ಲಿ ಜಮಾಯಿಸಿದ್ದರು. ಉಪೇಂದ್ರಗೆ ವಿಶ್ ಮಾಡಲು ಅವರ ಮನೆ ಮುಂದೆ ಜಮಾಸಿದ್ದ ಅಭಿಮಾನಿಗಳ ಜೊತೆ ಉಪೇಂದ್ರ ಹುಟ್ಟುಹಬ್ಬ ಆಚರಿಸಿಕೊಂಡರು. 

ಇದೇ ವೇಳೆ ಅಭಿಮಾನಿಯೊಬ್ಬರು ಮೈಸೂರು ಪೇಟೆ, ಶಾಲನ್ನು ಹೊದಿಸಿ ಸನ್ಮಾನ ಮಾಡಿದರು. ಸಂಗೀತ ನಿರ್ದೇಶಕ ಗುರುಕಿರಣ್ ಉಪೇಂದ್ರ ಜೊತೆಗಿದ್ದರು. ಈ ವೇಳೆ ಮಾತನಾಡಿದ ಉಪೇಂದ್ರ ಕಾವೇರಿಯ ವಿವಾದದಲ್ಲಿ ಕರ್ನಾಟಕ ಹೊತ್ತಿ ಉರಿಯತ್ತಿದೆ. ಆದ್ರಿಂದ ಈ ಬಾರಿ ಹುಟ್ಟುಹಬ್ಬ ಆಚರಣೆ ಬೇಡ ಎಂದುಕೊಂಡಿದ್ದೆ. ಆದರೆ ಅಭಿಮಾನಿಗಳು ಅರೇಂಜ್ ಮಾಡಿದ್ರಿಂದ ಆಚರಿಸಿಲೆೇಬೇಕಾಯ್ತು ಎಂದಿದ್ದಾರೆ.