ಬೆಂಗಳೂರು ಪಶ್ಚಿಮ ವಿಭಾಗದ ಡಿಸಿಪಿ ರವಿ ಡಿ. ಚನ್ನಣ್ಣನವರ್ ಸಹ ತಮ್ಮ ಟ್ವಿಟರ್ ಖಾತೆಯಲ್ಲಿ ಅಗಲಿದ ಮಾಣಿಕ್ಯನಿಗೆ ಕಂಬನಿ ಮಿಡಿದಿದ್ದಾರೆ.

'ಲಿಂಗೈಕರಾದ ಡಾ.ಶ್ರೀ ಶಿವಕುಮಾರ ಸ್ವಾಮಿಗಳ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪಾರ್ಥಿಸುತ್ತೇವೆ. ದುಃಖದಲ್ಲಿರುವ ಸಮಸ್ತ ಭಕ್ತಾಭಿಮಾನಿಗಳ ಶೋಕದಲ್ಲಿ ನಾವು ಸಹ ಭಾಗಿ. ಜಾತಿ, ಮತ, ಧರ್ಮಗಳ ಭೇದವಿಲ್ಲದೇ ಎಲ್ಲರ ಹಿತಕ್ಕಾಗಿ ದುಡಿದ ಮಹಾನ್ ಚೇತನ ನಡೆದಾಡುವ ದೇವರು...' ಎಂದು ಟ್ವೀಟ್ ಮಾಡಿದ್ದಾರೆ.

 

ಕಾಯಕಯೋಗಿ ಶಿವೈಕ್ಯರಾಗಿರುವುದಕ್ಕೆ ದೇಶದ ಪ್ರಮುಖ ಗಣ್ಯರು ಸಂತಾಪ ಸೂಚಿಸಿದ್ದಾರೆ. ರಾಜಕಾರಣಿಗಳು, ಸಿನಿ ಪ್ರಮುಖರು ಸೇರಿ ದೇಶ ವಿದೇಶಗಳಿಂದಲೂ ಶ್ರೀಗಳು ಚಿರಿ ನಿದ್ರೆಗೆ ಜಾರಿದ್ದಕ್ಕೆ ಭಕ್ತರು ಮಮ್ಮುಲ ಮರುಗಿದ್ದಾರೆ.

ಶತಮಾನದ ಸಂತ ಸಿದ್ಧಗಂಗಾ ಶ್ರೀಗಳ ನೆನಪು-ಮೆಲುಕು