ಅಜ್ಜಿಯ ಸೀರೆಯುಟ್ಟು ಸಂಭ್ರಮಿಸಿದ ರಶ್ಮಿಕಾ ಮಂದಣ್ಣ; 61 ವರ್ಷದಷ್ಟು ಹಳೆಯದಾದ ಸೀರೆಯಲ್ಲಿ ಕಂಗೊಳಿಸಿದ ಚೆಲುವೆ

First Published 6, Mar 2018, 9:18 AM IST
Rashmika Mandanna Saree
Highlights

ಹೆಣ್ಣು ಮಕ್ಕಳು ಎಷ್ಟೇ ಎತ್ತರಕ್ಕೆ ಹೋದರೂ ಎಷ್ಟೇ ದೊಡ್ಡ ಸಾಧನೆ ಮಾಡಿದರೂ  ತುಂಬಾ ಭಾವುಕರಾಗಿರುತ್ತಾರೆ. ತಮ್ಮ ಬಾಳಿನ ಪ್ರಮುಖವಾದ ಸಂದರ್ಭದಲ್ಲಿ ಅಮ್ಮನ  ಸೀರೆಯನ್ನು ಉಡುವುದು, ಅಜ್ಜಿಯ ಉಂಗುರವನ್ನು ಧರಿಸುವುದು ತುಂಬಾ ಸಹಜ ಪ್ರಕ್ರಿಯೆ. ಟೆಕ್ನಾಲಜಿ ಎಷ್ಟೇ ಮುಂದುವರಿದರೂ ಸ್ಯಾಂಡಲ್‌ವುಡ್‌ನಿಂದ ಹಾಲಿವುಡ್'ವರೆಗೆ ಈ ಭಾವುಕತೆ ಮಾತ್ರ ಹಾಗೇ ಉಳಿದಿದೆ ಅನ್ನುವುದಕ್ಕೆ ಎರಡು ಸಾಕ್ಷಿ ಇಲ್ಲಿದೆ. 

ಬೆಂಗಳೂರು (ಮಾ. 06): ಹೆಣ್ಣು ಮಕ್ಕಳು ಎಷ್ಟೇ ಎತ್ತರಕ್ಕೆ ಹೋದರೂ ಎಷ್ಟೇ ದೊಡ್ಡ ಸಾಧನೆ ಮಾಡಿದರೂ  ತುಂಬಾ ಭಾವುಕರಾಗಿರುತ್ತಾರೆ. ತಮ್ಮ ಬಾಳಿನ ಪ್ರಮುಖವಾದ ಸಂದರ್ಭದಲ್ಲಿ ಅಮ್ಮನ  ಸೀರೆಯನ್ನು ಉಡುವುದು, ಅಜ್ಜಿಯ ಉಂಗುರವನ್ನು ಧರಿಸುವುದು ತುಂಬಾ ಸಹಜ ಪ್ರಕ್ರಿಯೆ. ಟೆಕ್ನಾಲಜಿ ಎಷ್ಟೇ ಮುಂದುವರಿದರೂ ಸ್ಯಾಂಡಲ್‌ವುಡ್‌ನಿಂದ ಹಾಲಿವುಡ್'ವರೆಗೆ ಈ ಭಾವುಕತೆ ಮಾತ್ರ ಹಾಗೇ ಉಳಿದಿದೆ ಅನ್ನುವುದಕ್ಕೆ ಎರಡು ಸಾಕ್ಷಿ ಇಲ್ಲಿದೆ. 

ಇತ್ತೀಚೆಗೆ ಝೀ ಕನ್ನಡ ವಾಹಿನಿಯು ರಶ್ಮಿಕಾ ಮಂದಣ್ಣ ಅವರಿಗೆ   ಹೆಮ್ಮೆಯ ಕನ್ನಡಿಗ ಪ್ರಶಸ್ತಿ ನೀಡಿ ಪುರಸ್ಕರಿಸಿತು. ಈ ಪ್ರಶಸ್ತಿ ಪ್ರದಾನ  ಸಮಾರಂಭಕ್ಕೆ ಆಗಮಿಸಿದ್ದ ರಶ್ಮಿಕಾ ಮಂದಣ್ಣರ ಕ್ಸ್ಟ್ಯಾೂಮ್ ಎಲ್ಲರನ್ನೂ ಸೆಳೆದಿತ್ತು. ರಶ್ಮಿಕಾ ಕೂರ್ಗ್ ಶೈಲಿಯಲ್ಲಿ ಸೀರೆಯುಟ್ಟುಕೊಂಡು  ಬಂದಿದ್ದರು. ಆ ಸೀರೆ ರಶ್ಮಿಕಾ ಮಂದಣ್ಣ  ಅವರ ಬದುಕಲ್ಲಿ ತುಂಬಾ ಪ್ರಾಮುಖ್ಯತೆ  ಹೊಂದಿರುವ ಸೀರೆ. ಯಾಕೆ ಅದು ವಿಶೇಷ  ಎಂದರೆ ಈ ಸೀರೆ ರಶ್ಮಿಕಾ ಅವರ  ಅಜ್ಜಿಯದು. ಅವರ ಅಜ್ಜಿ ತನ್ನ ಮದುವೆ
ದಿನದಂದು ಉಟ್ಟುಕೊಂಡಿದ್ದ ಸೀರೆ ಅದು.
ಅನಂತರ ಆ ಸೀರೆ ರಶ್ಮಿಕಾ ಅಮ್ಮನಿಗೆ ಬಂದಿದೆ. ಈಗ ಮೂರನೇ ಜನರೇಷನ್ನಿನ ರಶ್ಮಿಕಾ ಮಂದಣ್ಣ ಆ ಸೀರೆಯುಟ್ಟಿದ್ದಾರೆ. ಅದರಲ್ಲೂ  ಹೆಮ್ಮೆಯ ಕನ್ನಡಿಗ ಪ್ರಶಸ್ತಿ ಪಡೆಯುವ ಸಂದರ್ಭದಲ್ಲಿ ಈ  ಸೀರೆಯುಟ್ಟಿದ್ದಕ್ಕೂ ಕಾರಣ ಇದೆ. ರಶ್ಮಿಕಾ ಅವರನ್ನು ತುಂಬಾ ಇಷ್ಟಪಡುತ್ತಿದ್ದ ಅವರ ಅಜ್ಜಿ ತನ್ನ ಕೊನೆಯ ದಿನಗಳಲ್ಲಿ ‘ನೀನು ತುಂಬಾ ಎತ್ತರಕ್ಕೆ ಹೋಗುತ್ತೀಯಾ’ ಎಂದಿದ್ದರಂತೆ. ಆ ಮಾತು ರಶ್ಮಿಕಾ  ಅವರಿಗೆ ಇನ್ನೂ ನೆನಪಿದೆ. ಅದೇ ಕಾರಣಕ್ಕೆ ಭಾವುಕರಾದ ರಶ್ಮಿಕಾ ಮಂದಣ್ಣ ಅದೇ ಸೀರೆಯುಟ್ಟುಕೊಂಡು ಪ್ರಶಸ್ತಿ ಸ್ವೀಕರಿಸಿದ್ದಾರೆ.  ಅಂದಹಾಗೆ ಈ ಸೀರೆ 61 ವರ್ಷ ಹಳೆಯ ಸೀರೆ.

loader