ರಶ್ಮಿಕಾ ಹೊಸ ಚಿತ್ರ ವೃತ್ರ

Rashmika Mandanna announce her new film
Highlights

ವಾರದ ಹಿಂದೆ ರಶ್ಮಿಕಾ ಮಂದಣ್ಣ ಹೊಸ ನಿರ್ದೇಶಕ ಗೌತಮ್ ಅಯ್ಯರ್ ಸಾರಥ್ಯದಲ್ಲಿ ಕ್ರೈಂ ಬ್ರಾಂಚ್ ಇನ್‌ಸ್ಪೆಕ್ಟರ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನುವುದು ಖಚಿತವಾಗಿತ್ತು.

ಒಂದು ಕಡೆ ದೊಡ್ಡ ದೊಡ್ಡ ಸ್ಟಾರ್‌ಗಳ ಜೊತೆ ಬಹುನಿರೀಕ್ಷಿತ ಚಿತ್ರಗಳ ಸಾಲು ಮತ್ತೊಂದು ಕಡೆ ತೆಲುಗಿನಲ್ಲೂ ಬ್ಯುಸಿಯಾಗಿದ್ದ ಚೆಲುವೆ ಈ ಸಿನಿಮಾಗೆ ಗ್ರೀನ್ ಸಿಗ್ನಲ್ ಕೊಟ್ಟಾಗ ಟೈಟಲ್ ಇನ್ನೂ ಅಂತಿಮವಾಗಿರಲಿಲ್ಲ. ಈಗ ‘ವೃತ್ರ’ ಟೈಟಲ್ ಫಿಕ್ಸ್ ಆಗಿದೆ. ರಶ್ಮಿಕಾ ಚಿತ್ರದಲ್ಲಿ ಚೆಸ್ ಪ್ಲೇಯರ್ ಆಗಿ ಕಾಣಿಸಿಕೊಂಡು ನೂತನವಾದ ಮೈಂಡ್ ಗೇಮ್ ಚಿತ್ರವನ್ನು ಮಾಡುವ ಆಶಯ ಹೊಂದಿದ್ದಾರೆ. ಚಿತ್ರ ಘೋಷಣೆಯಾಗುತ್ತಿದಂತೆಯೇ ‘ತಂದೆಯವರಿಗೆ ತನ್ನನ್ನು ಪೊಲೀಸ್ ಅಧಿಕಾರಿಯಾಗಿ ನೋಡುವ ಆಸೆ ಇತ್ತು. ಅವರಿಗೆ ಈ ಚಿತ್ರ ಅರ್ಪಿಸುತ್ತಿದ್ದೇನೆ’ ಎಂದಿದ್ದ ರಶ್ಮಿಕಾ ಈಗ ‘ಇನ್ವೆಸ್ಟಿಗೇಟಿಂಗ್ ಆಫೀಸರ್ ಆ ವರ್ಡ್ ಕೇಳುದ್ರೆ ಏನೋ ಕಡಕ್ ಫೀಲ್ ಬರುತ್ತೆ. ಸಿಕ್ಕಿರುವ ಪಾತ್ರಕ್ಕೆ ನ್ಯಾಯ ಒದಗಿಸುವ ಪ್ರಯತ್ನ ಮಾಡುತ್ತೇನೆ’ ಎಂದು ಹೇಳಿಕೊಂಡಿದ್ದಾರೆ.

ಈ ಮೊದಲು ರಕ್ಷಿತ್ ಶೆಟ್ಟಿ ಜೊತೆಗೆ ಕೆಲಸ ಮಾಡಿರುವ ಗೌತಮ್ ಅಯ್ಯರ್ ‘೭೭೭ ಚಾರ್ಲಿ’ ಚಿತ್ರಕ್ಕಾಗಿ ಕೆಲಸ ಮಾಡುತ್ತಿದ್ದಾರೆ. ತಮ್ಮದೇ ಕತೆಯನ್ನು ಸಿದ್ಧಮಾಡಿಕೊಂಡು ತೆರೆಗೆ ತರಲು ಮುಂದಾಗಿದ್ದ ಗೌತಮ್ ಅಯ್ಯರ್ ರಶ್ಮಿಕಾ ಅವರನ್ನು ಆಫೀಸರ್ ಪಾತ್ರದಲ್ಲಿ ತೆರೆಗೆ ತರುವ ಮೊದಲ ಪ್ರಯತ್ನವಾಗಿ ಫಸ್ಟ್‌ಲುಕ್ ಅನ್ನು ವಾರದ ಹಿಂದೆ ಬಿಡುಗಡೆ ಮಾಡಿದ್ದರು. ಈಗ ಚಿತ್ರದ ಟೈಟಲ್ ಅಂತಿಮವಾಗಿದೆ.

 

loader