ಬಾಲಿವುಡ್‌ ನಟ ರಣವೀರ್‌ ಸಿಂಗ್‌ ತಮ್ಮ ಮತ್ತು ನಟಿ ದೀಪಿಕಾ ಪಡುಕೋಣೆ ಜೊತೆಗಿನ ಸಂಬಂಧದ ಬಗ್ಗೆ ಮೊದಲ ಬಾರಿಗೆ ಮಾತನಾಡಿದ್ದಾರೆ.

ನವದೆಹಲಿ: ಬಾಲಿವುಡ್‌ ನಟ ರಣವೀರ್‌ ಸಿಂಗ್‌ ತಮ್ಮ ಮತ್ತು ನಟಿ ದೀಪಿಕಾ ಪಡುಕೋಣೆ ಜೊತೆಗಿನ ಸಂಬಂಧದ ಬಗ್ಗೆ ಮೊದಲ ಬಾರಿಗೆ ಮಾತನಾಡಿದ್ದಾರೆ.

‘ದೀಪಿಕಾ ಪಡುಕೋಣೆಯನ್ನು ನನ್ನ ಬಾಳಿನಲ್ಲಿ ಪಡೆದಿದ್ದು ನನ್ನ ಪುಣ್ಯ’ ಎಂದು ಹೇಳಿದ್ದಾರೆ. ನ್ಯೂಸ್‌ 18 ರೈಸಿಂಗ್‌ ಇಂಡಿಯಾ ಸಮಾವೇಶದಲ್ಲಿ ಮಾತನಾಡಿದ ರಣವೀರ್‌ ಸಿಂಗ್‌, ದೀಪಿಕಾ ಪಡುಕೋಣೆಯ ಜೊತೆಗಿನ ಸಂಬಂಧವನ್ನು ಖಚಿತಪಡಿಸಲೂ ಇಲ್ಲ ಅಥವಾ ನಿರಾಕರಿಸಲೂ ಇಲ್ಲ. ಪರಸ್ಪರ ಪ್ರಶಂಸೆ ನಮ್ಮಿಬ್ಬರ ಮಧ್ಯೆ ಇದೆ. ‘ನಟಿಯಾಗಿ ನಾನು ದೀಪಿಕಾಳನ್ನು ಉನ್ನತ ಮಟ್ಟದಲ್ಲಿ ಇಟ್ಟಿದ್ದೇನೆ.

ಆದರೆ, ದೀಪಿಕಾ ನನ್ನನ್ನು ಹಾಗೆ ನೋಡುತ್ತಿಲ್ಲ. ಕಲಾವಿದನಾಗಿ ಆಕೆಯಿಂದ ಸಾಕಷ್ಟುಕಲಿಯುವುದಿದೆ’ ಎಂದು ರಣವೀರ್‌ ಹೇಳಿದ್ದಾರೆ.