ಮೇಡಮ್ ಟುಸ್ಸಾಡ್ಸ್ ನಲ್ಲಿ ಬಾಲಿವುಡ್ ಡಿಂಪಲ್ ಕ್ವೀನ್ ಮೇಣದ ಪ್ರತಿಮೆ, ನೋಡಿ ಬೆರಗಾದ ಪತಿ ರಣವೀರ್ ಸಿಂಗ್ ಹೇಳಿದ್ದೇನು?
ಪ್ರಖ್ಯಾತ ಸಿನಿ ತಾರೆಯರ ಮೇಣದ ಪ್ರತಿಮೆ ಮಾಡಿ ಪ್ರದರ್ಶನಕ್ಕಿಡುವ ಮೇಡಮ್ ಟುಸ್ಸಾಡ್ಸ್, ಈಗ ಬಾಲಿವುಡ್ ಬೆಡಗಿ ದೀಪಿಕಾ ಪಡುಕೊಣೆ ಪ್ರತಿಮೆಯನ್ನು ಸೃಷ್ಟಿಸಿದೆ.
ತನ್ನದೇ ಮೇಣದ ಪ್ರತಿಮೆ ನೋಡಲು ದೀಪಿಕಾ ಕುಟುಂಬದೊಂದಿಗೆ ಲಂಡನ್ ಗೆ ತೆರಳಿದ್ದರು. ಇನ್ನು ದಿ ಪ್ರೌಡ್ ಹಸ್ಬೆಂಡ್ ರಣವೀರ್ ಸಿಂಗ್ ಪ್ರತಿಮೆ ಜೊತೆಯಾಗಿ ತೆಗೆಸಿಕೊಂಡ ಫೊಟೋ ವೈರಲ್ ಆಗಿದೆ. ಅದಕ್ಕೆ ಕಾರಣ ಅದರಲ್ಲಿರುವ ಕ್ಯಾಪ್ಶನ್.
ಹೆಂಡತಿ ಹಾಗೂ ಆಕೆಯ ಮೇಣದ ಪ್ರತಿಮೆ ಪಕ್ಕ ಪೂಸ್ ಕೊಟ್ಟ ರಣವೀರ್ ‘DP 2.0 Original toh mere paas hai ’ ಎಂದು ಇನ್ ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ.
ಈ ಹಿಂದೆ ಪ್ರಿಯಾಂಕ ಚೋಪ್ರಾ ಮೇಣದ ಪ್ರತಿಮೆ ನೋಡಿ ನಿಕ್ ಜೋನಾಸ್ ಕೂಡ ಪ್ರೌಡ್ ಹಸ್ಬೆಂಡ್ ಫೀಲ್ ಆಗಿದ್ದರು
