ಅಷ್ಟಕ್ಕೂ ದೀಪಿಕಾ ಪಡುಕೋಣೆ ಬಗ್ಗೆ ರಣಬೀರ್ ಭಾವುಕರಾಗಿದ್ದು ಯಾಕೆ?

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 23, Aug 2018, 1:27 PM IST
Ranveer Singh melt with Deepika Padukone's new photo
Highlights

ದೀಪಿಕಾ ಪಡುಕೋಣೆ, ರಣವೀರ್ ಸಿಂಗ್ ತಮ್ಮ ಸಂಬಂಧದ ಬಗ್ಗೆ ಸಾರ್ವಜನಿಕವಾಗಿ ಹೇಳಿಕೊಳ್ಳುವುದು ಕಮ್ಮಿ. ಇದೀಗ ದೀಪಿಕಾ ಬಗ್ಗೆ ರಣವೀರ್ ಸಿಂಗ್ ಭಾವುಕರಾಗಿದ್ದಾರೆ.  

ಮುಂಬೈ (ಆ. 23): ದೀಪಿಕಾ ಪಡುಕೋಣೆ, ರಣವೀರ್ ಸಿಂಗ್ ತಮ್ಮ ಸಂಬಂಧದ ಬಗ್ಗೆ ಸಾರ್ವಜನಿಕವಾಗಿ ಹೇಳಿಕೊಳ್ಳುವುದು ಕಮ್ಮಿ. ಇದೀಗ ದೀಪಿಕಾ ಬಗ್ಗೆ ರಣವೀರ್ ಸಿಂಗ್ ಭಾವುಕರಾಗಿದ್ದಾರೆ. 

ದೀಪಿಕಾ ಪಡುಕೋಣೆ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸಕ್ರಿಯರಾಗಿದ್ದಾರೆ. ಅವರ ಫೋಟೋಗಳು, ವಿಡಿಯೋಗಳು ವೈರಲ್ ಆಗ್ತಾನೆ ಇರ್ತವೆ. ರೀಸೆಂಟಾಗಿ ದೀಪಿಕಾ ಇನ್ಸ್ಟಾಗ್ರಾಮ್ ನಲ್ಲಿ ಫೋಟೋವೊಂದನ್ನು ಶೇರ್ ಮಾಡಿಕೊಂಡಿದ್ದಾರೆ. ಮುದ್ಮುದ್ದಾಗಿ ಕಾಣಿಸುತ್ತಿದ್ದಾರೆ. ಇವರ ಫೋಟೋ ನೋಡಿ ರಣವೀರ್ ಸಿಂಗ್ ಭಾವುಕರಾಗಿದ್ದಾರೆ. ನಾನು ಕರಗುತ್ತಿದ್ದೇನೆ ಎಂದು ಕಮೆಂಟ್ ಬೇರೆ ಮಾಡಿದ್ದಾರೆ. 

 

 

a day well spent...📸

A post shared by Deepika Padukone (@deepikapadukone) on Aug 22, 2018 at 7:47am PDT


ಇವರಿಬ್ಬರು ಹಾಲಿವುಡ್, ಬಾಲಿವುಡ್ ಸೆಲೆಬ್ರಿಟಿಗಳ ಜೊತೆ ಇಟಲಿಯಲ್ಲಿ ದಾಂಪತ್ಯಕ್ಕೆ ಕಾಲಿಡಲಿದ್ದಾರೆ ಎನ್ನಲಾಗಿದೆ. ಆಪ್ತ ಸ್ನೇಹಿತರು, ಕುಟುಂಬಸ್ಥರಿಗೆ ಮಾತ್ರ ಆಹ್ವಾನ ನೀಡಲಾಗಿದೆ. ಬರುವವರು ಕ್ಯಾಮೆರಾ  ಬಳಸುವಂತಿಲ್ಲ ಎಂದು ಹೇಳಲಾಗಿದೆ. 

loader