ಇತ್ತೀಚೆಗೆ ತೆರೆಕಂಡ ‘ಪದ್ಮಾವತ್’ ಚಿತ್ರದಲ್ಲಿ ಪದ್ಮಾವತಿಯ ಪಾತ್ರಧಾರಿ ದೀಪಿಕಾ ಪಡುಕೋಣೆಗಿಂತ ಚಿತ್ರದ ಅಲಾವುದ್ದೀನ್ ಖಿಲ್ಜಿ ಪಾತ್ರದಲ್ಲಿ ರಣವೀರ್ ಸಿಂಗ್ ಅಭಿನಯ ಎಲ್ಲರಿಂದ ಭಾರೀ ಹೊಗಳಿಗೆ ಪಾತ್ರವಾಗಿದೆ.

ಮುಂಬೈ: ಇತ್ತೀಚೆಗೆ ತೆರೆಕಂಡ ‘ಪದ್ಮಾವತ್’ ಚಿತ್ರದಲ್ಲಿ ಪದ್ಮಾವತಿಯ ಪಾತ್ರಧಾರಿ ದೀಪಿಕಾ ಪಡುಕೋಣೆಗಿಂತ ಚಿತ್ರದ ಅಲಾವುದ್ದೀನ್ ಖಿಲ್ಜಿ ಪಾತ್ರದಲ್ಲಿ ರಣವೀರ್ ಸಿಂಗ್ ಅಭಿನಯ ಎಲ್ಲರಿಂದ ಭಾರೀ ಹೊಗಳಿಗೆ ಪಾತ್ರವಾಗಿದೆ. ಆದರೆ ಇಂಥದ್ದೊಂದು ಪಾತ್ರ ನಿಭಾಯಿಸಲು ರಣವೀರ್ 21 ದಿನ ಕೋಣೆಯೊಂದರಲ್ಲಿ ಅಕ್ಷರಶಃ ಏಕಾಂಗಿಯಾಗಿದ್ದರಂತೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಈ ಬಗ್ಗೆ ಸ್ವತಃ ಅವರೇ ಮಾಹಿತಿ ನೀಡಿದ್ದಾರೆ. ‘ಖಿಲ್ಜಿಯ ಪಾತ್ರಕ್ಕೆ ಬೇಕಾಗಿದ್ದ ಸ್ವಾರ್ಥತೆ, ಮಹತ್ವಾಕಾಂಕ್ಷೆ ಮತ್ತು ದುರಾಸೆಯ ಮಟ್ಟಕ್ಕೆ ನಾನು ಹೋಲುತ್ತಿಲ್ಲ ವಾದುದರಿಂದ, ಆ ಪಾತ್ರದಲ್ಲಿ ಮುಳುಗಲು, ನನ್ನನ್ನು ನಾನು ಒಂದು ರೀತಿಯಲ್ಲಿ ಏಕಾಂಗಿಯಾಗಿಸಿಕೊಂಡಿದ್ದೆ.

ಕತ್ತಲ ಅನುಭವವನ್ನು ಅನುಭವಿಸಲು ನನ್ನನ್ನು ನಾನು ತೊಡಗಿಸಿಕೊಂಡಿದ್ದೆ. ಗೋರೆಗಾಂವ್ ಮನೆಯಲ್ಲಿ ನಾನು ಬೀಗ ಹಾಕಿಕೊಂಡು 21 ದಿನಗಳನ್ನು ಕಳೆದಿದ್ದೆ. ನಾನು ಸಂಪೂರ್ಣ ಏಕಾಂಗಿಯಾಗಿದ್ದೆ’ ಎಂದು ರಣವೀರ್ ಹೇಳಿದ್ದಾರೆ.