ಬಾಲಿವುಡ್ ಗಲ್ಲಿ ಬಾಯ್ ರಣವೀರ್ ಸಿಂಗ್ ಏನಾದರೊಂದು ಮಾಡುತ್ತಾ ಕಿತಾಪತಿ ಮಾಡುತ್ತಾ, ತಮಾಷೆ ಮಾಡುತ್ತಿರುತ್ತಾರೆ. ರಣವೀರ್ ಇದ್ದಲ್ಲಿ ಅಲ್ಲೊಂದಿಷ್ಟು ತಮಾಷೆ, ತರ್ಲೆಗಳಿಗೆ ಕೊನೆಯಿರುವುದಿಲ್ಲ. 

ಇದೀಗ ರಣವೀರ್ ಲಂಡನ್ ನಲ್ಲಿದ್ದು ಹಾಲಿಡೇ ಎಂಜಾಯ್ ಮಾಡುತ್ತಿದ್ದಾರೆ. ಅಲ್ಲಿ ರಣವೀರ್ ರನ್ನು ಕಂಡೊಡನೇ ಒಂದಿಷ್ಟು ಅಭಿಮಾನಿಗಳು ಸುತ್ತುವರೆದಿದ್ದಾರೆ. ಇವರೊಡನೆ ಸೇರಿ ಡೋಲು ಬಾರಿಸಿದ್ದಾರೆ. ಸೆಲ್ಫಿ ತೆಗೆದುಕೊಂಡಿದ್ದಾರೆ. ಇವೆಲ್ಲರ ನಡುವೆ ರಣವೀರ್ ವೀಲ್ ಚೇರ್ ನಲ್ಲಿ ಕುಳಿತಿದ್ದ ಮಹಿಳೆಯೊಬ್ಬರಿಗೆ ರೋಸ್ ಕೊಟ್ಟು ಮಾತನಾಡಿಸಿದ್ದಾರೆ. 

 

ಅಭಿಮಾನಿಗಳ ನಡುವೆ ಮಹಿಳೆಯೊಬ್ಬರು ವೀಲ್ ಚೇರ್ ನಲ್ಲಿ ರಣವೀರ್ ರನ್ನು ಭೇಟಿಯಾಗಲು ಕುಳಿತಿದ್ದರು. ಅವರನ್ನು ಗಮನಿಸಿದ ರಣವೀರ್ ತಾವೇ ಅಲ್ಲಿಗೆ ಹೋಗಿ ರೋಸ್ ಕೊಟ್ಟಿದ್ದಾರೆ. ಆ ಮಹಿಳೆ ರಣವೀರ್ ಕೆನ್ನೆಗೆ ಮುತ್ತು ಕೊಟ್ಟು ವಿಶ್ ಮಾಡಿದ್ದಾರೆ. ರಣವೀರ್ ಅವರ ಕೈ ಕುಲುಕಿದ್ದಾರೆ. ಈ ವಿಡಿಯೋ ವೈರಲ್ ಆಗಿದೆ. 

ರಣವೀರ್ ಸದ್ಯ ಕಪಿಲ್ ದೇವ್ ಬಯೋಪಿಕ್ 83 ಯಲ್ಲಿ ಬ್ಯುಸಿಯಾಗಿದ್ದಾರೆ.