ಮುಂಬಯಿ(ಸೆ.16): ಸಾಮಾಜಿಕ ಜಾಲತಾಣದಲ್ಲಿ ಕಮೆಂಟ್ ಮೂಲಕ ಎಲ್ಲರ ಕಾಲೆಳೆದ ಬಾಲಿವುಡ್‌ ನಟ ರಿಷಿ ಕಪೂರ್‌ ಮತ್ತೆ ವಿವಾದದಲ್ಲಿ ಸಿಲುಕಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ನಿನ್ನೆ ಮುಂಬೈನಲ್ಲಿ ಗಣೇಶ ಮೂರ್ತಿ ವಿಸರ್ಜನೆಗೆ ಬಾಲಿವುಡ್‌‌ ತಾರೆಯರು ಸೇರಿದಂತೆ ರಾಜಕೀಯ ನಾಯಕರು ವಿಘ್ನ ನಿವಾರಕನಿಗೆ ಭಕ್ತಿಯಿಂದ ಪೂಜೆ ಸಲ್ಲಿಸಿ ಗಣೇಶನ ನಿಮಜ್ಜನದಲ್ಲಿ ನಿರತರಾಗಿದ್ದರು. ಈ ವೇಳೆ ರಿಶಿ ಕಪೂರ್‌ ಮಾಧ್ಯಮ ಪ್ರತಿನಿಧಿ ಮೇಲೆ ಹಲ್ಲೆ ಮಾಡಿದ್ದಾರೆ. ರಿಷಿ ಕಪೂರ್ ಮದ್ಯಪಾನ ಮಾಡಿದ್ದು, ಇದರಿಂದ ಸ್ಥಿಮಿತ ಕಳೆದುಕೊಂಡು ವರದಿಗಾರನೊಂದಿಗೆ ಅಸಭ್ಯವಾಗಿ ವರ್ತನೆ ಮಾಡಿ, ಆತನಿಗೆ ಕಪಾಳಮೋಕ್ಷ ಮಾಡಿದ್ದಾರೆ.

ಈ ವೇಳೆ ಪುತ್ರ ರಣಬೀರ್‌ ಕಪೂರ್‌ ಕೂಡ ಸ್ಥಳದಲ್ಲಿ ಉಪಸ್ಥಿತರಿದ್ದರು.