ಸುದೀಪ್‌ ಮತ್ತು ರಮ್ಯಾ ಸಂಬಂಧ ಮೊದಲಿಂದಲೂ ತಿರುವು ಮುರುವಿನ ಹಾದಿ ಇದ್ದಂತೆ. ಒಂದ್ಸಲ ಖುಷಿಯಿಂದ ಮಾತಾಡುತ್ತಾ ಫೋಟೋಗೆ ಪೋಸ್‌ ಕೊಟ್ಟರೆ ಇನ್ನೊಂದ್ಸಲ ಶರಂಪರ ಜಗಳಾಡಿದ ಉದಾಹರಣೆಯೂ ಇದೆ. ಆಮೇಲೆ ಇದ್ದಕ್ಕಿದ್ದಂತೆ ಮತ್ತೆ ಯಾವುದೋ ಒಂದು ಸಿನಿಮಾದಲ್ಲಿ ಇಬ್ಬರೂ ಜೊತೆಯಾಗುತ್ತಾರೆ. ಹೀಗೆ ಒಂಥರಾ ವಿಚಿತ್ರ ಫೆಂಡ್ಸ್‌ ಥರ ಇದ್ದರು ಅವರಿಬ್ಬರು. ಆಮೇಲೆ ರಮ್ಯಾ ಚಿತ್ರರಂಗ ಬಿಟ್ಟಮೇಲೆ ಫ್ರೆಂಡ್‌ಶಿಪ್ಪು ಬಿಟ್ಟು ಹೋಗಿತ್ತೋ ಏನೋ. ಆದರೆ ಈ ಗೆಳೆತನ ಮತ್ತೆ ಚಿಗುರಿದೆ.

ರಮ್ಯಾ ಚಿತ್ರರಂಗಕ್ಕೆ ಬಂದು ಹದಿನಾಲ್ಕು ವರ್ಷಗಳಾಗಿವೆ. ಈ ಸಂದರ್ಭದಲ್ಲಿ ಸುದೀಪ್‌ ಒಂದು ಟ್ವೀಟ್‌ ಮಾಡಿದ್ದರು. ಹದಿನಾಲ್ಕು ವರ್ಷಗಳ ಈ ಪಯಣದಲ್ಲಿ ತುಂಬಾ ಅಭಿಮಾನಿಗಳನ್ನು ಗಳಿಸಿದ್ದೀರಿ, ಕಂಗ್ರಾಟ್ಸ್‌ ಅಂತ ಹಾರೈಸಿದ್ದರು. ರಮ್ಯಾ ಅದಕ್ಕೆ ತಕ್ಷಣ ಪ್ರತಿಕ್ರಿಯಿಸಿದ್ದಾರೆ. ಥ್ಯಾಂಕ್ಯೂ ಸು ಎಂದೇ ಮಾತು ಶುರು ಮಾಡಿದ ರಮ್ಯಾ, ಈ ಪಯಣದಲ್ಲಿ ನಾವು ಸಹನಟರಾಗಿ ಕಳೆದ ಕ್ಷಣಗಳ ಅದ್ಭುತ ನೆನಪುಗಳಿವೆ ಎಂದಿದ್ದಾರೆ. ಇದನ್ನು ನೋಡಿ ಅವರಿಬ್ಬರ ಅಭಿಮಾನಿಗಳು ಖುಷಿಯೋ ಖುಷಿ.

Scroll to load tweet…

ವಿಸೂ- ರಮ್ಯಾ ಟ್ವೀಟ್‌ನ ಆರಂಭದಲ್ಲೇ ಮಂಗ ತನ್ನ ಕಣ್ಣು ಮುಚ್ಚಿಕೊಂಡಿರುವ ಇಮೋಜಿ ಹಾಕಿದ್ದಾರೆ. ಅದು ಅವರಿಬ್ಬರ ಆಪ್ತ ಗೆಳೆತನವನ್ನು ಸಾರುತ್ತದೆ ಎಂದು ನೀವು ಭಾವಿಸಬಹುದು.

ವರದಿ: ಕನ್ನಡಪ್ರಭ, ಸಿನಿವಾರ್ತೆ