ದೇಶವಿಡೀ ದೀಪಾವಳಿ ಸಂಭ್ರಮಾಚರಣೆಯಲ್ಲಿ ಮುಳುಗಿದ್ದು, ಜನರೆಲ್ಲರೂ ವಿಭಿನ್ನವಾಗಿ ಶುಭಾಷಯ ಕೋರುವುದರಲ್ಲಿ ತಲ್ಲೀನರಾಗಿದ್ದಾರೆ. ಆದರೆ ಸಿನಿಮಾ ನಿರ್ದೇಶಕ ರಾಮ್'ಗೋಪಾಲ್ ವರ್ಮಾ ಮಾತ್ರ ಜನರಿಗೆ #unhappydiwali ಎನ್ನುವ ಮೂಲಕ ತಮ್ಮ ದಿನಚರಿಯನ್ನು ಆರಂಭಿಸಿದ್ದಾರೆ. ಬೆಳಿಗ್ಗೆ ಸುಮಾರು 8 ಗಂಟೆಗೆ ಒಂದರ ಬಳಿಕ ಮತ್ತೊಂದರಂತೆ ಸುಮಾರು 5 ಟ್ವೀಟ್'ಗಳನ್ನು ಮಾಡಿದ್ದು, ಇವೆಲ್ಲದರಲ್ಲೂ #unhappydiwali ಎಂದು ಹಾರೈಸಿದ್ದಾರೆ. ಇನ್ನು ಆರನೆಯ ಟ್ವೀಟ್'ನಲ್ಲಿ ಶುಭಾಷಯಗಳನ್ನೇನೋ ಕೋರಿದ್ದಾರೆ. ಆದರೆ ದೀಪಾವಳಿ ಆಚರಿಸದವರಿಗೆ.
ನವದೆಹಲಿ(ಅ.30): ದೇಶವಿಡೀ ದೀಪಾವಳಿ ಸಂಭ್ರಮಾಚರಣೆಯಲ್ಲಿ ಮುಳುಗಿದ್ದು, ಜನರೆಲ್ಲರೂ ವಿಭಿನ್ನವಾಗಿ ಶುಭಾಷಯ ಕೋರುವುದರಲ್ಲಿ ತಲ್ಲೀನರಾಗಿದ್ದಾರೆ. ಆದರೆ ಸಿನಿಮಾ ನಿರ್ದೇಶಕ ರಾಮ್'ಗೋಪಾಲ್ ವರ್ಮಾ ಮಾತ್ರ ಜನರಿಗೆ #unhappydiwali ಎನ್ನುವ ಮೂಲಕ ತಮ್ಮ ದಿನಚರಿಯನ್ನು ಆರಂಭಿಸಿದ್ದಾರೆ. ಬೆಳಿಗ್ಗೆ ಸುಮಾರು 8 ಗಂಟೆಗೆ ಒಂದರ ಬಳಿಕ ಮತ್ತೊಂದರಂತೆ ಸುಮಾರು 5 ಟ್ವೀಟ್'ಗಳನ್ನು ಮಾಡಿದ್ದು, ಇವೆಲ್ಲದರಲ್ಲೂ #unhappydiwali ಎಂದು ಹಾರೈಸಿದ್ದಾರೆ. ಇನ್ನು ಆರನೆಯ ಟ್ವೀಟ್'ನಲ್ಲಿ ಶುಭಾಷಯಗಳನ್ನೇನೋ ಕೋರಿದ್ದಾರೆ. ಆದರೆ ದೀಪಾವಳಿ ಆಚರಿಸದವರಿಗೆ.
ಈ #unhappydiwali ಎಂಬ ಹಾರೈಕೆಯ ಹಿಂದಿನ ಮರ್ಮವೇನು? ಎಂದು ತಿಳಿದುಕೊಳ್ಳುವ ಕುತೂಹಲ ಕಾಡುವುದು ಸಹಜ. ಇವರ ಈ ನಡೆಯ ಹಿಂದೆ ಕಳಕಳಿಯಿದೆ. ದೀಪಾವಳಿ ಹಬ್ಬದ ಸಂದರ್ಭದಲ್ಲಿ ಪಟಾಕಿ ಸಿಡಿಸುವ ಭರಾಟೆಯಲ್ಲಿ ನಾವು ನಮಗರಿವಿಲ್ಲದಂತೆ ವಾಯು ಮಾಲಿನ್ಯ ಹಾಗೂ ಶಬ್ಧ ಮಾಲಿನ್ಯ ಮಾಡುತ್ತೇವೆ. ಇದರಿಂದ ಪರಿಸರ ಹಾನಿಯಾಗುವುದರೊಂದಿಗೆ ಪ್ರಾಣಿಗಳಿಗೂ ತೊಂದರೆಯಾಗುತ್ತದೆ ಇದು ಕಿಂಚಿತ್ತೂ ಸರಿಯಲ್ಲ.
ನಿರ್ದೇಶಕ ವರ್ಮಾ ಮಾಡಿರುವ ಮೊದಲನೇ ಟ್ವೀಟ್'ನಲ್ಲಿ 'ಪಟಾಕಿ ಸಿಡಿಸಿ ಜಿಂಕ್, ಸೋಡಿಯಮ್, ಮೆಗ್ನೀಶಿಯಂ ಹಾಗೂ ಪೊಟಾಷಿಯಂನಂತಹ ವಿಷಕಾರಿ ಅಂಶಗಳನ್ನು ಗಾಳಿಯಲ್ಲಿ ಬಿಟ್ಟು ವಾಯು ಮಾಲಿನ್ಯ ಮಾಡುವ ಪ್ರತಿಯೊಬ್ಬರಿಗೂ ನಾನು #unhappydiwali ಎಂದು ಹಾರೈಸುತ್ತೇನೆ' ಎಂದಿದ್ದಾರೆ.
ವರ್ಮಾ ತನ್ನ ಎರಡನೇ ಟ್ವೀಟ್'ನಲ್ಲಿ 'ತೀವ್ರ ಶಬ್ಧವುಳ್ಳ ಪಟಾಕಿಗಳನ್ನು ಸಿಡಿಸಿ ಹಿರಿಯರು ಹಾಗೂ ಮಕ್ಕಳಿಗೆ ತೊಂದರೆಯುಂಟು ಮಾಡುವವರಿಗೂ #unhappydiwali' ಎಂದಿದ್ದಾರೆ.
ತನ್ನ ಮೂರನೇ ಟ್ವೀಟ್'ನಲ್ಲಿ 'ಅಸ್ತಮಾ ಹಾಗೂ ಉಸಿರಾಟದ ತೊಂದರೆ ಅನುಭವಿಸುತ್ತಿರುವವರ ಸಮಸ್ಯೆ ಹೆಚ್ಚಾಗುವಂತೆ ಮಾಡಿದವರಿಗೂ #unhappydiwali' ಎಂದಿದ್ದಾರೆ.
ತನ್ನ ಮುಂದಿನ ಟ್ವೀಟ್'ನಲ್ಲಿ 'ಅಧಿಕ ಶಬ್ಧ ಹಾಗೂ ಪಟಾಕಿಯ ಬೆಳಕಿನಿಂದ ಪಶು-ಪಕ್ಷಿಗಳಿಗೆ ತೊಂದರೆಯುಂಟು ಮಾಡುವವರಿಗೂ ನಾನು #unhappydiwali ಹಾರೈಸುತ್ತೇನೆ' ಎಂದಿದ್ದಾರೆ.
ಇನ್ನು ತನ್ನ ಐದನೇ ಟ್ವೀಟ್'ನಲ್ಲಿ ನರಕಾಸುರ ಸತ್ತ ದಿನವನ್ನು ನರಕ ಚತುರ್ದಶಿ ಎಂದು ಆಚರಿಸುವ ಹಿಂದಿನ ಅರ್ಥ ತಿಳಿಯದವರಿಗೂ ನಾನು #unhappydiwali ಹಾರೈಸುತ್ತೇನೆ' ಎಂದಿದ್ದಾರೆ.
ಇನ್ನು ತನ್ನ ಕೊನೆಯ ಟ್ವೀಟ್'ನಲ್ಲಿ 'ದೀಪಾವಳಿ ಹಬ್ಬದ ಶುಭಾಷಯ ಕೋರಿದ್ದಾರೆ. ಆದರೆ ಇದು ಕೇವಲ ದೀಪಾವಳಿ ಆಚರಿಸದವರಿಗೆ. 'ದೀಪಾವಳಿ ಆಚರಿಸದವರೆಲ್ಲರಿಗೂ ನನ್ನ ಪರವಾಗಿ ದೀಪಾವಳಿ ಹಬ್ಬದ ಶುಭಾಷಯಗಳು. ನನ್ನ ಪ್ರಕಾರ ಪ್ರತಿ ದಿನವೂ ದೀಪಾವಳಿ' ಎಂದು ತಿಳಿಸಿದ್ದಾರೆ.
