ಪ್ರಸಿದ್ಧ ನಿರ್ದೇಶಕ ರಾಮ್ ಗೋಪಾಲ್ ವರ್ಮ ಮತ್ತೊಮ್ಮೆ ವಿವಾದಾತ್ಮಕ ಹೇಳಿಕೆಗಳಿಂದ ಸುದ್ದಿಯಲ್ಲಿದ್ದಾರೆ. ಶಿಕ್ಷಕರ ದಿನದಂದು ಅವರು ಮಾಡಿದ ಟ್ವೀಟ್ ಭಾರೀ ವಿವಾದಕ್ಕೆ ಕಾರಣವಾಗಿದೆ.

ವಿವಾದಗಳಿಗೆ ಮನೆಮಾತು:

ಟಾಲಿವುಡ್‌ನಲ್ಲಿ ಟ್ರೆಂಡ್ ಸೆಟ್ಟರ್ ಎಂದು ಹೆಸರುವಾಸಿಯಾದ ನಿರ್ದೇಶಕ ರಾಮ್ ಗೋಪಾಲ್ ವರ್ಮ. ವಿವಾದ ಅಂದ್ರೆ ವರ್ಮ, ವರ್ಮ ಅಂದ್ರೆ ವಿವಾದ ಅನ್ನೋ ಹಾಗೆ ಇತ್ತು ಪರಿಸ್ಥಿತಿ. ಆದರೆ ಈಗ ಸ್ವಲ್ಪ ಸೈಲೆಂಟ್ ಆಗಿದ್ದಾರೆ ಈ ನಿರ್ದೇಶಕ. ಟಾಲಿವುಡ್‌ನಲ್ಲಿ ತಮ್ಮ ಸಿನಿಮಾ ಜರ್ನಿ ಶುರುಮಾಡಿದ ವರ್ಮ, ಬಳಿಕ ಬಾಲಿವುಡ್‌ಗೆ ಹೋಗಿ ಅಲ್ಲೂ ಒಂದು ದಶಕಕ್ಕೂ ಹೆಚ್ಚು ಕಾಲ ತಮ್ಮದೇ ಆದ ಛಾಪು ಮೂಡಿಸಿದರು.

ರಂಗೀಲಾ, ಸತ್ಯ, ಸರ್ಕಾರ್, ರಕ್ತ ಚರಿತ್ರೆ ಹೀಗೆ ಸೂಪರ್ ಡೂಪರ್ ಹಿಟ್ ಸಿನಿಮಾಗಳಿಂದ ಸೈ ಎನಿಸಿಕೊಂಡರು. ಇಂಡಿಯನ್ ಫಿಲ್ಮ್ ಇಂಡಸ್ಟ್ರಿಯಲ್ಲಿ ಟ್ರೆಂಡ್ ಸೆಟ್ಟರ್ ಆಗಿ ನಿಂತ ವರ್ಮ, ಹಲವು ವಿವಾದಾತ್ಮಕ ಸಿನಿಮಾಗಳನ್ನೂ ಮಾಡಿ ಟೀಕೆಗೊಳಗಾಗಿದ್ದಾರೆ. ಈಗ ವರ್ಮ ಮತ್ತೊಂದು ವಿವಾದಕ್ಕೆ ಕಾರಣರಾಗಿದ್ದಾರೆ. ಈ ಶುಕ್ರವಾರ ವರ್ಮ ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದ ಹೇಳಿಕೆಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಟೀಕೆಗೆ ಗುರಿಯಾಗಿವೆ.

ರಾಮ್ ಗೋಪಾಲ್ ವರ್ಮ ಟೀಚರ್ಸ್ ಡೇ ವಿವಾದ:

ವರ್ಮ ಮನಸ್ಸಿನಲ್ಲಿ ಏನನ್ನೂ ಮುಚ್ಚಿಡುವುದಿಲ್ಲ. ತನಗೆ ಅನಿಸಿದ್ದನ್ನು ಹೇಳುವುದು ಅವರ ಸ್ವಭಾವ. ಹೀಗೆ ಹೇಳಬಾರದ್ದನ್ನೂ ಪಬ್ಲಿಕ್ ಆಗಿ ಹೇಳಿ ಟೀಕೆಗೆ ಗುರಿಯಾದ ಉದಾಹರಣೆಗಳು ಬೇಕಾದಷ್ಟಿವೆ. ಈಗ ಮತ್ತೊಮ್ಮೆ ವಿವಾದ ಸೃಷ್ಟಿಸಿದ್ದಾರೆ ಆರ್‌ಜಿವಿ. ವಿವರಗಳಿಗೆ ಬರುವುದಾದರೆ, ಟೀಚರ್ಸ್ ಡೇ ದಿನ ತಮ್ಮ ಜೀವನಕ್ಕೆ ಸ್ಫೂರ್ತಿ ನೀಡಿದವರ ಪಟ್ಟಿ ಹಂಚಿಕೊಂಡು ಅವರಿಗೆ ಸೆಲ್ಯೂಟ್ ಹೊಡೆಯುತ್ತೇನೆ ಎಂದಿದ್ದಾರೆ. ಆದರೆ ಆ ಪಟ್ಟಿಯಲ್ಲಿ ಅವರು ಹೇಳಿರುವ ಒಂದು ಹೆಸರು ಮೋಸ್ಟ್ ವಾಂಟೆಡ್ ಕ್ರಿಮಿನಲ್ ದಾವೂದ್ ಇಬ್ರಾಹಿಂ ಆಗಿರುವುದರಿಂದ ನೆಟ್ಟಿಗರು ತೀವ್ರವಾಗಿ ಪ್ರತಿಕ್ರಿಯಿಸಿದ್ದಾರೆ.

ವರ್ಮ ಪೋಸ್ಟ್:

“ನಾನು ನಿರ್ದೇಶಕನಾಗಲು, ನನ್ನ ಜೀವನದಲ್ಲಿ ನನಗೆ ಇಷ್ಟವಾದ್ದನ್ನು ಮಾಡಲು ನನ್ನನ್ನು ಪ್ರೇರೇಪಿಸಿದ ಎಲ್ಲಾ ಮಹಾನ್ ವ್ಯಕ್ತಿಗಳಿಗೆ ನನ್ನ ಸೆಲ್ಯೂಟ್. ನನಗೆ ಸ್ಫೂರ್ತಿಯಾದ ಅಮಿತಾಬ್ ಬಚ್ಚನ್, ಸ್ಟೀವನ್ ಸ್ಪೀಲ್‌ಬರ್ಗ್, ಅಯಾನ್ ರಾಂಡ್, ಬ್ರೂಸ್ ಲೀ, ಶ್ರೀದೇವಿ ಮತ್ತು ದಾವೂದ್ ಇಬ್ರಾಹಿಂ ಅವರಿಗೆ ಶಿಕ್ಷಕರ ದಿನದ ಶುಭಾಶಯಗಳು.” ಎಂದು ತಮ್ಮ ಪೋಸ್ಟ್‌ನಲ್ಲಿ ಬರೆದಿದ್ದಾರೆ. 

ಈ ಪೋಸ್ಟ್ ಹಾಕಿದ ಕೆಲವೇ ಹೊತ್ತಿನಲ್ಲಿ ವರ್ಮ ಟ್ವೀಟ್ ವೈರಲ್ ಆಯಿತು. ತಕ್ಷಣ ನೆಟ್ಟಿಗರು ದೊಡ್ಡ ಸಂಖ್ಯೆಯಲ್ಲಿ ಪ್ರತಿಕ್ರಿಯಿಸಿ ತೀವ್ರ ಟೀಕೆ ವ್ಯಕ್ತಪಡಿಸಿದ್ದಾರೆ. ಒಬ್ಬ ಅಂತಾರಾಷ್ಟ್ರೀಯ ಉಗ್ರ, ಭಾರತಕ್ಕೆ ಮೋಸ್ಟ್ ವಾಂಟೆಡ್ ಕ್ರಿಮಿನಲ್‌ನನ್ನು ಗುರು ಎಂದು ಹೇಳುವುದೇನು ಎಂದು ಪ್ರಶ್ನಿಸಿದ್ದಾರೆ. ಅದರಲ್ಲೂ ಪವಿತ್ರ ಎಂದು ಭಾವಿಸುವ ಶಿಕ್ಷಕರ ದಿನದಂದು ಹೀಗೆ ಮಾಡಿರುವುದು ತೀರಾ ಆಕ್ಷೇಪಾರ್ಹ ಎಂಬ ಕಾಮೆಂಟ್‌ಗಳು ಬರುತ್ತಿವೆ.

Scroll to load tweet…

ವರ್ಮ ಟ್ವೀಟ್‌ಗೆ ತೀವ್ರ ವಿರೋಧ

“ಇಂಥ ಟ್ವೀಟ್‌ಗಳು ಭಯಾನಕ. ದಾವೂದ್‌ನ ಹೆಸರು ಹೇಳಿಕೊಳ್ಳುವುದು ನಾಚಿಕೆಗೇಡು”

“ಇದು ಶಿಕ್ಷಕರ ದಿನ... ಕ್ರಿಮಿನಲ್‌ನನ್ನು ಮಾರ್ಗದರ್ಶಕ ಎಂದು ಹೇಳುವುದೇನು?”

“ನಿಮ್ಮ ಅಭಿಪ್ರಾಯ ನಿಮ್ಮದು, ಆದರೆ ಒಂದು ದಿನದ ವಿಶೇಷತೆಯನ್ನು ಈ ಮಟ್ಟಕ್ಕೆ ತಗ್ಗಿಸುವುದು ಸರಿಯಲ್ಲ.” ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ.

ದಾವೂದ್ ಇಬ್ರಾಹಿಂ ಭಾರತ ಹುಡುಕುತ್ತಿರುವ ಪ್ರಮುಖ ಕ್ರಿಮಿನಲ್, ಮುಂಬೈ ಬಾಂಬ್ ಸ್ಫೋಟ (1993) ಪ್ರಕರಣದ ಪ್ರಮುಖ ಆರೋಪಿ. ಹೀಗಿರುವಾಗ ಒಬ್ಬ ಪ್ರಸಿದ್ಧ ಸಿನಿಮಾ ನಿರ್ದೇಶಕ ಅವರನ್ನು “ಸ್ಫೂರ್ತಿದಾಯಕ” ಎಂದು ಹೇಳಿರುವುದು ದೊಡ್ಡ ವಿವಾದಕ್ಕೆ ಕಾರಣವಾಗಿದೆ. ವರ್ಮ ತಮ್ಮ ವಿಭಿನ್ನ ಅಭಿಪ್ರಾಯಗಳು, ಡೇರಿಂಗ್ ಹೇಳಿಕೆಗಳಿಂದ ಆಗಾಗ ವಿವಾದಗಳಲ್ಲಿ ಸಿಲುಕುತ್ತಿರುತ್ತಾರೆ. ಆದರೆ ಈ ಬಾರಿ ಮಾಡಿರುವ ಹೇಳಿಕೆಗಳು ಸಾಮಾಜಿಕವಾಗಿ ತೀವ್ರ ಆಕ್ಷೇಪಾರ್ಹವಾಗಿವೆ. ಈ ವಿಷಯ ಎಲ್ಲಿಗೆ ಹೋಗಿ ನಿಲ್ಲುತ್ತದೆ ಎಂದು ನೋಡಬೇಕು. ನೆಟ್ಟಿಗರ ಟ್ರೋಲ್, ಟೀಕೆಗಳು ಮುಂದುವರಿದರೂ ವರ್ಮ ತಮ್ಮ ಸ್ಟೈಲ್‌ನಲ್ಲಿ ಪ್ರತಿಕ್ರಿಯಿಸುತ್ತಾರೋ ಇಲ್ಲವೋ ಎಂಬುದನ್ನು ಗಮನಿಸಬೇಕಿದೆ.