ನಿರ್ದೇಶಕ ರಾಮ್ ಗೋಪಾಲ್ ವರ್ಮಾ ವಿವಾದ ಆಗಲೀ ಅಂತಾನೇ ಮಾಡ್ತಾರೋ ಅಥವಾ ಅವರು ಮಾಡುವುದು ವಿವಾದವಾಗುತ್ತೋ ಗೊತ್ತಿಲ್ಲ. ಯಾರೂ ನಿರೀಕ್ಷೆ ಮಾಡದ ರೀತಿಯಲ್ಲಿ ಹೇಳಿಕೆ ಕೊಡುತ್ತಾರೆ. ಚರ್ಚೆ ಹುಟ್ಟು ಹಾಕುತ್ತಾರೆ. ಅದರಲ್ಲೂ ಹೆಣ್ಣು ಮಕ್ಕಳ ವಿಚಾರದಲ್ಲಿ ತುಸು ಜಾಸ್ತಿಯೇ ಪೋಲಿ ಮಾಡುತ್ತಾರೆ. 

ಇತ್ತೀಚಿಕೆ ಬಾಲಿವುಡ್ ನಟಿ ಶೆರ್ಲಿನ್ ಚೋಪ್ರಾಗೆ ಅಶ್ಲೀಲ ವಿಡಿಯೋ ಕಳುಹಿಸಿ ಅಡಾಲ್ಟ್ ಸಿನಿಮಾದಲ್ಲಿ ನಟಿಸಲು ಆಫರ್ ಮಾಡಿದ್ದರು ಎಂಬ ಸುದ್ದಿ ವೈರಲ್ ಆಗಿತ್ತು. 

ಇದೀಗ ಇನ್ನೊಂದು ವಿಚಾರದಲ್ಲಿ ವೈರಲ್ ಆಗಿದ್ದಾರೆ. ಅಮೆರಿಕನ್ ನೀಲಿತಾರೆ ಮಿಯಾ ಮಲ್ಕೋವಾ ಅವರ ಬಿಕಿನಿ ಫೋಟೋವನ್ನು ಟ್ವಿಟರ್ ಶೇರ್ ಮಾಡಿಕೊಂಡಿದ್ದಾರೆ.  Its the Rectangualaric Triangular  curve of love ಎಂದು ಕ್ಯಾಪ್ಷನ್ ಕೊಟ್ಟು ಶೇರ್ ಮಾಡಿಕೊಂಡಿದ್ದರು. ಇದಕ್ಕೆ ನೆಟ್ಟಿಗರು ಕ್ಲಾಸ್ ತೆಗೆದುಕೊಂಡಾಗ ಡಿಲೀಟ್ ಮಾಡಿದ್ದಾರೆ. 

ಮಿಯಾ ಮಲ್ಕೋವಾ ಬೀಚ್ ನಲ್ಲಿ ಬಿಕಿನಿ ಹಾಕಿಕೊಂಡು ಮಲಗಿರುವ ಫೋಟೋ ಶೇರ್ ಮಾಡಿ ಕ್ಯಾಪ್ಷನ್ ಕೊಡಿ ಎಂದು ಕೇಳಿಕೊಂಡಿದ್ದರು. ಇದಕ್ಕೆ ಆರ್ ಜಿವಿ ಉತ್ತರಿಸಿದ್ದು ಹೀಗೆ. 

 

ಮಿಯಾ ಮಲ್ಕೋವಾ ಆರ್ ಜಿವಿ ಜೊತೆ ಗಾಡ್ ಸೆಕ್ಸ್ ಹಾಗೂ ಟ್ರುತ್ ಎನ್ನು ಸಾಕ್ಷ್ಯಚಿತ್ರ ಮಾಡಿದ್ದರು.