’ದಿ ವಿಲನ್’ ಚಿತ್ರದ ನಿರ್ದೇಶಕ ಪ್ರೇಮ್ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ  ಟ್ರೋಲ್‌ ಮಾಡುತ್ತಿದ್ದು, ಇದಕ್ಕೆ ಪತ್ನಿ ರಕ್ಷಿತಾ ಪ್ರೇಮ್  ಮತ್ತೆ ಚಾಟಿ ಏಟು ನೀಡಿದ್ದಾರೆ. ಟ್ರೋಲ್ ಮಾಡುವರಿಗೆ ಹೇಗೆಲ್ಲ ತಿವಿದಿದ್ದಾರೆ ಎನ್ನುವ ವಿವರ ಇಲ್ಲಿದೆ.

ಬೆಂಗಳೂರು, [ಅ.22]: ಕಳೆದ ವಾರ ಬಿಡುಗಡೆಗೊಂಡ ಬಹು ನಿರೀಕ್ಷಿತ ಪ್ರೇಮ್​ ನಿರ್ದೇಶನದ ‘ದಿ ವಿಲನ್​’ಗೆ ಪಾಸಿಟಿವ್​ ಹಾಗೂ ನೆಗಟಿವ್​ ಕಾಮೆಂಟ್​ಗಳು ವ್ಯಕ್ತವಾಗುತ್ತಿವೆ.

ಶಿವರಾಜ್‌ಕುಮಾರು ಮೇಲೆ ಕಿಚ್ಚ ಸುದೀಪ್ ಕೈ ಮಾಡಿರುವ ದೃಶ್ಯದ ವಿರುದ್ಧ, ಶಿವಣ್ಣ ಅಭಿಮಾನಿಗಳು ಆಕ್ರೋಶಗೊಂಡಿದ್ದು, ಪ್ರೇಮ್ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದಾರೆ. ಅಷ್ಟೇ ಅಲ್ಲದೇ ಮನಸಿಗೆ ಬಂದಂತೆ ಟ್ರೋಲ್​ ಮಾಡುತ್ತಿದ್ದು, ಇದರಲ್ಲಿ ಪ್ರೇಮ್ ಪತ್ನಿ ರಕ್ಷಿತಾ ಅವರನ್ನು ಎಳೆದು ತಂದಿದ್ದಾರೆ.

ಟೀಕಾಕಾರರಿಗೆ ಮುಟ್ಟಿನೋಡಿಕೊಳ್ಳುವ ಉತ್ತರ ನೀಡಿದ ರಕ್ಷಿತಾ

ಇವೆಲ್ಲವನ್ನೂ ನೋಡಿದ ನಿರ್ದೇಶಕ ಪ್ರೇಮ್​ ಪತ್ನಿ ರಕ್ಷಿತಾ, ಟ್ರೋಲ್ ಮಾಡಿದವರಿಗೆ ಚಾಟಿ ಬೀಸಿದ್ದಾರೆ. 'ದಿ ವಿಲನ್' ನಿರ್ದೇಶಕ ಪ್ರೇಮ್ ವಿರುದ್ಧ ಆಕ್ರೋಶ ಭುಗಿಲೆದ್ದ ಬೆನ್ನಲ್ಲೇ ಮಹಿಳೆಯರಿಗೆ ಮರ್ಯಾದೆ ಕೊಡದ ಅಭಿಮಾನಿಗಳಿಗೆ ರಕ್ಷಿತಾ ಪ್ರೇಮ್ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ.

Scroll to load tweet…

ಸಾಮಾಜಿಕ ಜಾಲತಾಣದಲ್ಲಿ ಕಾಲೆಳೆದವರಿಗೆ ಟ್ವೀಟ್ ಮೂಲಕ ಚಾಟಿ ಬೀಸಿರುವ ರಕ್ಷಿತಾ ಪ್ರೇಮ್, ಪ್ರತಿ‌ ನಿರ್ದೇಶಕನ ಆಲೋಚನೆ. ಸೃಜನಶೀಲತೆ. ಭಾವನೆಯನ್ನು ನಾನು ಗೌರವಿಸುತ್ತೇನೆ. ಚಿತ್ರರಂಗದಲ್ಲಿ ಎಲ್ಲರಿಗೂ ಅವರದ್ದೇ ಆದ ಸ್ಟೋರಿ ಇರತ್ತೆ. 

ಯಾರು ಯಾರಿಗೂ ಕಂಪೇರ್ ಮಾಡಬಾರದು. ಯಾರು ಇಲ್ಲಿಗೆ ಶ್ರಮ ಪಡದೆ ಆರಾಮಗಿ ಬಂದಿಲ್ಲ. ನಟನು ಹಾಗೂ ನನ್ನ ಯೋಗ್ಯತೆ ಬಗ್ಗೆ ಮಾತನಾಡುವ ಮೊದಲು ಹೆಣ್ಣು ಮಕ್ಕಳಿಗೆ ಗೌರವ ಕೊಡುವುದನ್ನು ಕಲಿಯಿರಿ ಎಂದು ಟ್ವೀಟ್ ಮೂಲಕ ತಿವಿದಿದ್ದಾರೆ.

ನಿಮಗ್ಯಾರಿಗಾದರೂ ನನ್ನನ್ನು ಈ ವಿಚಾರದಲ್ಲಿ ಟಾರ್ಗೆಟ್ ಮಾಡಬೇಕು ಅಂತಿದ್ದರೆ ಸಾಮಾಜಿಕ ಜಾಲತಾಣದಲ್ಲಿ ಬೇಡ ನೇರವಾಗಿ ಬನ್ನಿ ಎಂದು ಸವಾಲು ಹಾಕಿದ್ದಾರೆ.