ಬಾಲಿವುಡ್ ನಟಿ ರಾಖಿ ಸಾವಂತ್ ಬಾಲಿಶ ಹೇಳಿಕೆ ಕೊಡುವುದರಲ್ಲಿ ಸಿಕ್ಕಾಪಟ್ಟೆ ಫೇಮಸ್. ಬಿಜೆಪಿ ನಾಯಕ ಅರುಣ್ ಜೇಟ್ಲಿ ವಿಧಿವಶರಾಗಿರುವುದರ ಬಗ್ಗೆ ವಿವಾದಾತ್ಮಕ ಹೇಳಿಕೆ ಕೊಟ್ಟು ಸುದ್ದಿಯಲ್ಲಿದ್ದಾರೆ. 

ಅರುಣ್ ಜೇಟ್ಲಿ ಸಾವಿನ ವಿಚಾರ ವಾರದ ಹಿಂದೆಯೇ ಗೊತ್ತಿತ್ತಂತೆ! ನನಗೆ ಆಗಾಗ ಕನಸುಗಳು ಬೀಳುತ್ತಿರುತ್ತವೆ. ಕೆಲವೊಂದು ವಿಚಾರಗಳು ಮೊದಲೇ ತಿಳಿದು ಬಿಡುತ್ತವೆ. ಇದು ಈಶ್ವರ ನನಗೆ ಕೊಟ್ಟಿರುವ ವರ ಎಂದು ಬಾಲಿಶವಾಗಿ ಹೇಳಿಕೆ ಕೊಟ್ಟಿದ್ದಾರೆ. 

ಅರುಣ್ ಜೇಟ್ಲಿ ಕಾರ್ಯಗಳ ಬಗ್ಗೆ ಶ್ಲಾಘನೆ ಮಾಡುತ್ತಾ, ಅವರು ಒಳ್ಳೊಳ್ಳೆ ಬಜೆಟ್ ಗಳನ್ನು ಕೊಟ್ಟಿದ್ದಾರೆ. ಇಡೀ ದೇಶ ಅವರನ್ನು ನೆನಪಿಟ್ಟುಕೊಳ್ಳುತ್ತದೆ. ಮನುಷ್ಯ ಜನ್ಮ ಒಂದೇ ಬಾರಿ ಸಿಗುತ್ತದೆ. ಅದನ್ನು ಸದುಪಯೋಗಪಡಿಸಿಕೊಳ್ಳೋಣ. ಹೋಗಬೇಕಾದರೆ ಏನನ್ನೂ ತೆಗೆದುಕೊಂಡು ಹೋಗುವುದಿಲ್ಲ. ಎಲ್ಲರ ಜೊತೆ ಚೆನ್ನಾಗಿ ಬದುಕೋಣ ಎಂದು ಹೇಳಿದ್ದಾರೆ. 

 

 
 
 
 
 
 
 
 
 
 
 
 
 
 
 

A post shared by Rakhi Sawant (@rakhisawant2511) on Aug 24, 2019 at 2:17am PDT