ರಜಿನಿಗಿಂತಲೂ ಮುನ್ನ ಕಮಲ್ ಹಾಸನ್ ಕೂಡ ಜಲ್ಲಿಕಟ್ಟುವಿಗೆ ಬೆಂಬಲ ಸೂಚಿಸಿದ್ದನ್ನು ಸ್ಮರಿಸಬಹುದು.

ಚೆನ್ನೈ(ಜ.14): ಸಂಕ್ರಾಂತಿ ಹಬ್ಬದಂದು ತಮಿಳುನಾಡಿನಲ್ಲಿ ಏರ್ಪಡಿಸಲಾಗುವ ಜನಪ್ರಿಯ ಜಲ್ಲಿಕಟ್ಟು ಸ್ಪರ್ಧೆಗೆ ಸೂಪರ್ ಸ್ಟಾರ್ ರಜನಿಕಾಂತ್ ಬೆಂಬಲ ವ್ಯಕ್ತಪಡಿಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಹೋರಿಯನ್ನು ಬಳಸಲಾಗುವ ಜಲ್ಲಿಕಟ್ಟು ಸ್ಪರ್ಧೆ ತಮಿಳುನಾಡಿನ ಸಂಸ್ಕೃತಿ ಎಂದು ಅವರು ಪ್ರತಿಪಾದಿಸಿದ್ದಾರೆ.

ವಿಕಾತನ್ ಸಿನಿಮಾ ಪ್ರಶಸ್ತಿಗಳ ಸಮಾರಂಭದಲ್ಲಿ ಮಾತನಾಡಿದ ಅವರು, ‘‘ಕಾನೂನು ನಿಯಮಗಳು ಏನೇ ಹೇಳಿದರೂ, ಸಾಂಪ್ರದಾಯಿಕ ಮತ್ತು ತಮಿಳುನಾಡಿನ ಸಂಸ್ಕೃತಿಯಾಗಿರುವ ಜಲ್ಲಿಕಟ್ಟು ಸ್ಪರ್ಧೆಯನ್ನು ಏರ್ಪಡಿಸಲೇಬೇಕು,’’ ಎಂದು ಹೇಳಿದ್ದಾರೆ.

ರಜಿನಿಗಿಂತಲೂ ಮುನ್ನ ಕಮಲ್ ಹಾಸನ್ ಕೂಡ ಜಲ್ಲಿಕಟ್ಟುವಿಗೆ ಬೆಂಬಲ ಸೂಚಿಸಿದ್ದನ್ನು ಸ್ಮರಿಸಬಹುದು.

‘ಕಬಾಲಿ’ ಚಿತ್ರದಲ್ಲಿನ ಡಾನ್ ಪಾತ್ರಕ್ಕಾಗಿ ರಜನಿಕಾಂತ್ ಉತ್ತಮ ನಟ ಎಂಬ ಪ್ರಶಸ್ತಿಗೆ ಭಾಜನರಾದರು. ಕಳೆದ ವರ್ಷವಷ್ಟೇ ಜಲ್ಲಿಕಟ್ಟು ಆಚರಣೆ ಮೇಲೆ ಸುಪ್ರೀಂ ನಿಷೇಧ ಹೇರಿತ್ತು.