Asianet Suvarna News Asianet Suvarna News

ಸ್ಯಾಂಡಲ್'ವುಡ್'ನಲ್ಲಿ ಮತ್ತೊಂದು ಹೊಸ ದಾಖಲೆ ಸೃಷ್ಟಿಸಿದ ರಾಜಕುಮಾರ

ಖುಷಿಯಲ್ಲಿ ಪುನೀತ್ ರಾಜ್ ಕುಮಾರ್ ಹಾಗು ನಿರ್ದೇಶಕ ಸಂತೋಷ್ ಆನಂದ್ ರಾವ್ ಮತ್ತು ಚಿತ್ರತಂಡ ಆಗಮಿಸಿ ರಾಜಕುಮಾರನ ಸಂಭ್ರಮಾಚರಣೆಯಲ್ಲಿ ಭಾಗಿಯಾಗಿದ್ರು.

Rajakumara Set New Record
  • Facebook
  • Twitter
  • Whatsapp

ಬೆಂಗಳೂರು(ಜು.01): ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ರಾಜಕುಮಾರ ಸಿನಿಮಾ  ನೂರು ದಿನಗಳನ್ನ ಪೂರೈಸಿದೆ. ಈ ಹಿನ್ನಲೆಯಲ್ಲಿ ಪುನೀತ್ ರಾಜ್ ಕುಮಾರ್ ಅಭಿಮಾನಿ ಸಂಘದಿಂದ   ನರ್ತಕಿ ಚಿತ್ರಮಂದಿರದಲ್ಲಿ ನೂರು ದಿನದ ಕೇಕ್ ಕಟ್ ಮಾಡಿ ಸಂಭ್ರಮಿಸಲಾಯಿತು. ಬರೋಬ್ಬರಿ 45 ಕೇಂದ್ರದಲ್ಲಿ ರಾಜಕುಮಾರ ಸಿನಿಮಾ ನೂರು ದಿನ ಕಂಪ್ಲಿಟ್ ಮಾಡಿರೋದು ಚಿತ್ರತಂಡಕ್ಕೆ ಖುಷಿ ತಂದಿದೆ . ಈ ಖುಷಿಯಲ್ಲಿ ಪುನೀತ್ ರಾಜ್ ಕುಮಾರ್ ಹಾಗು ನಿರ್ದೇಶಕ ಸಂತೋಷ್ ಆನಂದ್ ರಾವ್ ಮತ್ತು ಚಿತ್ರತಂಡ ಆಗಮಿಸಿ ರಾಜಕುಮಾರನ ಸಂಭ್ರಮಾಚರಣೆಯಲ್ಲಿ ಭಾಗಿಯಾಗಿದ್ರು.ಪುನೀತ್ ರಾಜ್ ಕುಮಾರ್ ಮಾತಾಡಿ ಸಿನಿಮಾ 100ನೇ ದಿನ‌ ಪೂರೈಸಿರೋದು  ಖುಷಿ ತಂದಿದೆ.  ಹಾಗೇ ಸಿನಿಮಾ ನೋಡಿದ ಪ್ರೇಕ್ಷಕರಿಗೆ ಧನ್ಯವಾದ ಹೇಳುತ್ತೇನೆ ಅಂದ್ರು.ಕಾರಣಾಂತರಗಳಿಂದ ಕೆಲ‌ ಜಿಲ್ಲೆಗಳಿಗೆ ಭೇಟಿ ನೀಡಲು ಸಾಧ್ಯವಾಗಿಲ್ಲ  .  ಮುಂದಿನ‌ ದಿನಗಳಲ್ಲಿ‌ ಆ ಜಿಲ್ಲೆಗಳಿಗೂ ಭೇಟಿ ನೀಡ್ತೀನಿ ಅಂದ್ರು .

Follow Us:
Download App:
  • android
  • ios