ಕಜಕಿಸ್ತಾನ ರೂಪದರ್ಶಿ ಜತೆ ರಾಹುಲ್ 3ನೇ ಮದುವೆ!
ಬಿಜೆಪಿ ಮಾಜಿ ಮುಖಂಡ ಪ್ರಮೋದ್ ಮಹಾಜನ್‌ರ ಪುತ್ರ, ಬಿಗ್‌ಬಾಸ್ ರಿಯಾಲಿಟಿ ಶೋನ ಮಾಜಿ ಸ್ಪರ್ಧಿ ರಾಹುಲ್ ಮಹಾಜನ್, ಕಜಕಿಸ್ತಾನದ ರೂಪದರ್ಶಿ ನತಾಲಿಯಾ ಅವರನ್ನು ಮಂಗಳವಾರ ಮುಂಬೈನ ಮಲ್ಬಾರ್ ಹಿಲ್ಸ್‌ನಲ್ಲಿ ವಿವಾಹವಾಗಿದ್ದಾರೆ.
ನವದೆಹಲಿ[ನ.24]: ಬಿಜೆಪಿ ಮಾಜಿ ಮುಖಂಡ ಪ್ರಮೋದ್ ಮಹಾಜನ್‌ರ ಪುತ್ರ, ಬಿಗ್‌ಬಾಸ್ ರಿಯಾಲಿಟಿ ಶೋನ ಮಾಜಿ ಸ್ಪರ್ಧಿ ರಾಹುಲ್ ಮಹಾಜನ್, ಕಜಕಿಸ್ತಾನದ ರೂಪದರ್ಶಿ ನತಾಲಿಯಾ ಅವರನ್ನು ಮಂಗಳವಾರ ಮುಂಬೈನ ಮಲ್ಬಾರ್ ಹಿಲ್ಸ್‌ನಲ್ಲಿ ನಡೆದ ಖಾಸಗಿ ಸಮಾರಂಭವೊಂದರಲ್ಲಿ ವಿವಾಹವಾಗಿದ್ದಾರೆ.
ಆಪ್ತ ಸ್ನೇಹಿತರು ಹಾಗೂ ಕುಟುಂಬ ಸದಸ್ಯರಿಗಷ್ಟೇ ಆಹ್ವಾನ ನೀಡಲಾಗಿತ್ತು. ಇದು ರಾಹುಲ್‌ರ ಮೂರನೇ ಮದುವೆ. 43 ವರ್ಷದ ರಾಹುಲ್ ಮಹಾಜನ್ ಹಾಗೂ ಇಲಿಯಾನ ನಡುವೆ 18 ವರ್ಷಗಳ ಅಂತರವಿದೆ. ಈ ಹಿಂದೆ ರಾಹುಲ್ ಮಹಾಜನ್ ಪೈಲಟ್ ಶ್ವೇತಾ ಸಿಂಗ್ ಜತೆ ರಿಯಾಲಿಟಿ ಟೀವಿ ಸ್ಟಾರ್ ಡಿಂಪಿ ಗಂಗೂಲಿ ಅವರನ್ನು ವಿವಾಹವಾಗಿದ್ದರು. ಕೌಟುಂಬಿಕ ಹಿಂಸೆ ಆರೋಪದಿಂದಾಗಿ ಇವರಿಬ್ಬರ ಜೊತೆಗಿನ ಸಂಬಂಧ ಮುರಿದು ಬಿದ್ದಿತ್ತು.