ಪ್ರಜ್ವಲ್ ದೇವರಾಜ್, ದೇವರಾಜ್ ಆರೋಗ್ಯ ಸ್ಥಿ ಬಗ್ಗೆ ರಾಗಿಣಿ ದೇವರಾಜ್ ಪೋಸ್ಟ್  | ಅಭಿಮಾನಿಗಳಿಗೆ ಥ್ಯಾಂಕ್ಸ್ ಹೇಳಿದ ರಾಗಿಣಿ | ಶೀಘ್ರದಲ್ಲೇ ಅಭಿಮಾನಿಗಳ ಜೊತೆ ಮಾತಿಗೆ ಸಿಗಲಿದ್ದಾರೆ ಪ್ರಜ್ವಲ್ ಹಾಗೂ ದೇವರಾಜ್

ಬೆಂಗಳೂರು (ಸೆ. 25): ಕಾರು ಅಪಘಾತದಲ್ಲಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ದರ್ಶನ್, ದೇವರಾಜ್, ಪ್ರಜ್ವಲ್ ದೇವರಾಜ್ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ. ಗುಣಮುಖರಾಗುತ್ತಿದ್ದಾರೆ. ಅಭಿಮಾನಿಗಳು, ಹಿತೈಷಿಗಳು, ಕುಟುಂಬದವರು ಇವರು ಬೇಗ ಗುಣಮುಖರಾಗಲೆಂದು ಹಾರೈಸುತ್ತಿದ್ದಾರೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ನಟ ಪ್ರಜ್ವಲ್ ದೇವರಾಜ್ ಪತ್ನಿ ರಾಗಿಣಿ ದೇವರಾಜ್, ನಿಮ್ಮೆಲ್ಲರ ಪ್ರೀತಿ, ಹಾರೈಕೆಯೇ ನಮ್ಮ ಶಕ್ತಿ. ಅಪ್ಪಾ ಇಂದು ಡಿಸ್ಚಾರ್ಜ್ ಆಗುತ್ತಿದ್ದಾರೆ. ಎಲ್ಲಾ ಅಭಿಮಾನಿಗಳ ಜೊತೆ ಶೀಘ್ರದಲ್ಲೇ ಮಾತಿಗೆ ಸಿಗಲಿದ್ದಾರೆ ಎಂದು ಇನ್ಸ್ಟಾಗ್ರಾಮ್ ನಲ್ಲಿ ಬರೆದುಕೊಂಡಿದ್ದಾರೆ.