ಬೆಂಗಳೂರು (ಸೆ.16): ಸ್ಯಾಂಡಲ್​ ವುಡ್​ ನ ತುಪ್ಪದ ಹುಡ್ಗಿ ರಾಗಿಣಿ ಈಗ ಟೀಚರ್ ಆಗಿದ್ದಾರೆ. ಅದು ಜೋಗಿ ಪ್ರೇಮ್ ಗೆ ಅನ್ನೋದು ವಿಶೇಷ. ಹೌದು..ರಘು ಹಾಸನ್ ನಿರ್ದೇಶನದ ಗಾಂಧಿಗಿರಿ ಚಿತ್ರದಲ್ಲಿ ರಾಗಿಣಿ ಮತ್ತು ಜೋಗಿ ಪ್ರೇಮ್ ಅಭಿನಯಿಸಿದ್ದಾರೆ. ಮೈಮಾಟ ಬಿಂಬಿಸೋ ಥರ ಸೀರೆ ಉಟ್ಟುಕೊಂಡ ರಾಗಿಣಿ, ಜೋಗಿ ಪ್ರೇಮ್ ಗೆ ಮಾದಕರ ರೀತಿಯಲ್ಲಿಯೇ ಇಂಗ್ಲೀಷ್ ಪಾಠ ಮಾಡ್ತಿದ್ದಾರೆ. ಈಗ ಈ ದೃಶ್ಯದ ಮೇಕಿಂಗ್ ಕೂಡ ಹೊರ ಬಿದ್ದಿದೆ. ಅಮ್ಮನ ಪಾತ್ರದಲ್ಲಿ ಅರುಂಧತಿ ನಾಗ್ ಅಭಿನಯಿಸಿದ್ದಾರೆ.ಭಾವನಾ ರಾವ್ ಕೂಡ ಚಿತ್ರದಲ್ಲಿ ಸೆಕೆಂಡ್ ಹೀರೋಯಿನ್, ಆದಿ ಲೋಕೇಶ್, ರಂಗಾಯಣ ರಘು, ಹೀಗೆ ಇನ್ನೂ ಹಲವು ಕಲಾವಿದರಿದ್ದಾರೆ.