'ಭೂಮಿಪುತ್ರ' ಮೇಲೆ ರಾಧಿಕಾ ಮುಸಿಸು ಇಂಥದ್ದೊಂದು ಸುದ್ದಿ ಗಾಂಧಿನಗರದಲ್ಲಿ ತಣ್ಣಗೆ ಹರಿದಾಡುತ್ತಿದೆ. ಅದು ‘ಭೂಮಿಪುತ್ರ' ಚಿತ್ರದ ಸುತ್ತ. ಏನು ವಿವಾದ? ಮಾಜಿ ಮುಖ್ಯಮಂತ್ರಿ ಜೀವನಾಧಾರಿತ ಚಿತ್ರ ‘ಭೂಮಿಪುತ್ರ'. ಎಚ್‌ ಡಿ ಕುಮಾರಸ್ವಾಮಿ ಅವರ ಬಯೋಪಿಕ್‌ ಇದು. ಅರ್ಜುನ್‌ ಸರ್ಜಾ ಹೀರೋ. ಒಬ್ಬ ರಾಜಕಾರಣಿ ಬದುಕಿನ ಸಿನಿಮಾ ಎಂದ ಮೇಲೆ ವಾದ-ವಿವಾದ, ಪರ- ವಿರೋಧಗಳು ಇದ್ದೇ ಇರುತ್ತವೆ. ಎಚ್‌ಡಿಕೆ ಅವರು ಮುಖ್ಯಮಂತ್ರಿಯಾಗಿದ್ದ 20 ತಿಂಗಳ ಆಡಳಿತ ಪಯಣವನ್ನು ಮಾತ್ರ ಕೇಂದ್ರವಾಗಿಟ್ಟುಕೊಂಡು ‘ಭೂಮಿಪುತ್ರ' ಸಿನಿಮಾ ಶುರು ಮಾಡುತ್ತಿದ್ದಾರೆ. ಈ ಚಿತ್ರದಲ್ಲಿ ಏನೆಲ್ಲ ತೋರಿಸುತ್ತಾರೆ ಎಂಬುದು ಸದ್ಯಕ್ಕೆ ಗುಟ್ಟಾಗಿರುವ ವಿಷಯ.
'ಭೂಮಿಪುತ್ರ' ಮೇಲೆ ರಾಧಿಕಾ ಮುಸಿಸು ಇಂಥದ್ದೊಂದು ಸುದ್ದಿ ಗಾಂಧಿನಗರದಲ್ಲಿ ತಣ್ಣಗೆ ಹರಿದಾಡುತ್ತಿದೆ. ಅದು ‘ಭೂಮಿಪುತ್ರ' ಚಿತ್ರದ ಸುತ್ತ. ಏನು ವಿವಾದ? ಮಾಜಿ ಮುಖ್ಯಮಂತ್ರಿ ಜೀವನಾಧಾರಿತ ಚಿತ್ರ ‘ಭೂಮಿಪುತ್ರ'. ಎಚ್ ಡಿ ಕುಮಾರಸ್ವಾಮಿ ಅವರ ಬಯೋಪಿಕ್ ಇದು. ಅರ್ಜುನ್ ಸರ್ಜಾ ಹೀರೋ. ಒಬ್ಬ ರಾಜಕಾರಣಿ ಬದುಕಿನ ಸಿನಿಮಾ ಎಂದ ಮೇಲೆ ವಾದ-ವಿವಾದ, ಪರ- ವಿರೋಧಗಳು ಇದ್ದೇ ಇರುತ್ತವೆ. ಎಚ್ಡಿಕೆ ಅವರು ಮುಖ್ಯಮಂತ್ರಿಯಾಗಿದ್ದ 20 ತಿಂಗಳ ಆಡಳಿತ ಪಯಣವನ್ನು ಮಾತ್ರ ಕೇಂದ್ರವಾಗಿಟ್ಟುಕೊಂಡು ‘ಭೂಮಿಪುತ್ರ' ಸಿನಿಮಾ ಶುರು ಮಾಡುತ್ತಿದ್ದಾರೆ. ಈ ಚಿತ್ರದಲ್ಲಿ ಏನೆಲ್ಲ ತೋರಿಸುತ್ತಾರೆ ಎಂಬುದು ಸದ್ಯಕ್ಕೆ ಗುಟ್ಟಾಗಿರುವ ವಿಷಯ.
ಎಸ್. ನಾರಾಯಣ್ ಅವರು ಹೇಳಿದ್ದೇನು?
‘ಅಧಾರರಹಿತವಾದ ಇಂಥ ಸುದ್ದಿಗಳಿಗೆ ನಾನು ಪ್ರತಿಕ್ರಿಯೆ ನೀಡಲಾರೆ. ಸದ್ಯಕ್ಕೆ ಭೂಮಿಪುತ್ರ ಸಿನಿಮಾ ಚಿತ್ರಕಥೆಯ ಹಂತದಲ್ಲಿದೆ. ಒಬ್ಬ ನಿರ್ದೇಶಕನಾಗಿ ಈ ಚಿತ್ರದ ಮೂಲಕ ಏನು ಹೇಳುತ್ತಿದ್ದೇನೆ ಎಂಬುದನ್ನು ಚಿತ್ರದ ನಿರ್ಮಾಪಕ, ನಾಯಕ ಹಾಗೂ ಕುಮಾರಸ್ವಾಮಿ ಅವರಿಗೆ ಮಾತ್ರ ನಾನು ಉತ್ತರಿಸಬೇಕು. ನಾನು ಮಾಡಿಕೊಳ್ಳುತ್ತಿರುವ ಕತೆ ಆ ಮೂವರಿಗೇ ಸರಿಯಾಗಿ ಗೊತ್ತಿಲ್ಲ. ಹಾಗಿದ್ದ ಮೇಲೆ ನನ್ನ ಸಿನಿಮಾ ಒಳಗೊಂಡಿರುವ ಚಿತ್ರಕಥೆ ಬಗ್ಗೆ ಯಾರೋ ಬೇಸರ ಮಾಡಿಕೊಂಡರು ಅನ್ನುವುದರಲ್ಲಿ ಅರ್ಥವಿದೆಯೇ? ನನ್ನ ಸಿನಿಮಾದಲ್ಲಿ ಯಾವ ಅಂಶಗಳು ಇರಬೇಕು, ಯಾವುದು ಇರಬಾರದು ಎಂಬುದನ್ನು ನಿರ್ಧರಿಸುವ ಸ್ವಾತಂತ್ರ್ಯ ಚಿತ್ರದ ನಿರ್ದೇಶಕನಾಗಿ ನನಗೆ ಮಾತ್ರ ಇದೆ. ಹೀಗಾಗಿ ಸಿನಿಮಾ ಶುರುವಾಗುವ ಮುನ್ನವೇ ಚಿತ್ರದಲ್ಲಿ ಅದಿಲ್ಲ, ಇದಿಲ್ಲ ಅನ್ನುವವರಿಗೆಲ್ಲ ನಾನು ಸಮಾಧಾನ ಹೇಳಲಿಕ್ಕಾಗೋದಿಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ಈ ಸಿನಿಮಾ ಮಾಡುತ್ತಿರುವುದು ಯಾರನ್ನೋ ವೈಭವೀಕರಣ ಮಾಡಿ, ಮತ್ತೊಬ್ಬರಿಗೆ ನೋವು ಕೊಡುವುದಕ್ಕಲ್ಲ. ಒಂದು ಸ್ಫೂರ್ತಿದಾಯಕ ಚಿತ್ರವನ್ನು ಮಾಡುತ್ತಿದ್ದೇನೆ. ಅಲ್ಲದೆ ಇದೊಂದು ಇತಿಹಾಸ. ನನ್ನ ಪ್ರಕಾರ ಇತಿಹಾಸ ತುಂಬಾ ಶುದ್ಧವಾಗಿರಬೇಕು. ಇದರ ಹೊರ ತಾಗಿ ಬೇರೆ ಯಾವ ಮಾತು ಗಳಿಗೂ ನಾನು ಕಿವಿ ಕೊಡಲ್ಲ' ಎನ್ನುತ್ತಾರೆ ಎಸ್ ನಾರಾಯಣ್.
ವರದಿ: ಕನ್ನಡಪ್ರಭ, ಸಿನಿವಾರ್ತೆ
