ತೆಲುಗು ಮತ್ತು ತಮಿಳಿನಲ್ಲಿ ಸಿನಿಮಾ ಮತ್ತು ಕಿರುತೆರೆ ಎರಡರಲ್ಲೂ ಬೇಡಿಕೆಯ ನಟಿ ಎನಿಸಿಕೊಂಡಿರುವ, ಈಗಾಗಲೇ ಕನ್ನಡದ ಹಲವು ಸಿನಿಮಾಗಳಲ್ಲಿ ನಟಿಸಿರುವ ಶರತ್‌ಕುಮಾರ್‌ ಅವರ ಪತ್ನಿ ರಾಧಿಕಾ ಶರತ್‌ಕುಮಾರ್‌.

ಕಲಾ ನಿರ್ದೇಶಕರಾಗಿ, ನಟರಾಗಿ ಗುರುತಿಸಿಕೊಂಡಿರುವ ಬಹುಮುಖ ಪ್ರತಿಭೆ ಅರುಣ್‌ ಸಾಗರ್‌ ಅವರ ಬಗ್ಗೆ ಹೆಚ್ಚು ಹೇಳಬೇಕಿಲ್ಲ. ಇವರಿಬ್ಬರ ಜುಗಲ್‌ಬಂದಿಯಲ್ಲಿ ಈ ಧಾರಾವಾಹಿಯ ಸಾಗಲಿದ್ದು, ‘ಚಂದ್ರಕುಮಾರಿ’ ಮೂಲಕ ಜ.7ರಿಂದ ಉದಯ ವಾಹಿನಿಯಲ್ಲಿ ನೋಡುಗರ ಮುಂದೆ ಬಂದಿದ್ದಾರೆ.

ರಮಣ ಲೈಫ್ ರಿಯಲ್ ರಾಧಾ ಮಿಸ್! ಬಿಚ್ಚಿಟ್ಟರು ಲವ್ ಸ್ಟೋರಿ

ಸೋಮವಾರದಿಂದ ಶುಕ್ರವಾರದವರೆಗೂ ಪ್ರತಿ ದಿನ ರಾತ್ರಿ 8 ಗಂಟೆಗೆ ಪ್ರಸಾರವಾಗುತ್ತಿರುವ ಈ ಧಾರಾವಾಹಿ, ತಾಯಿ ಹಾಗೂ ಮಗಳ ನಡುವಿನ ಶತಮಾನಗಳ ಹಿಂದಿನ ಸಂಘರ್ಷದ ಕಥಾಹಂದರ ಹೊಂದಿದದೆ. ಸುರೇಶ್‌ ಕೃಷ್ಣ ನಿರ್ದೇಶನ ಇರುವ ಗ್ರಾಫಿಕ್ಸ್‌, ಅದ್ದೂರಿ ಸೆಟ್‌ಗಳು, ಮನರಂಜನೆ, ಫ್ಯಾಂಟಸಿ ಜತೆಗೆ ಸಂಬಂಧಗಳ ಮಹತ್ವ, ಪ್ರೀತಿ ಮತ್ತು ಸಾಹಸವನ್ನು ಪ್ರಧಾನವಾಗಿ ಒಳಗೊಂಡಿರುವ ಈ ಧಾರಾವಾಹಿಯನ್ನು ರಾಧಿಕಾ ಶರತ್‌ಕುಮಾರ್‌ ಅವರ ರೆಡಾನ್‌ ಸಂಸ್ಥೆ ನಿರ್ಮಿಸುತ್ತಿದೆ. ಶೋಭಾ ನಾಯ್ಡು ಧಾರಾವಾಹಿಯ ಮತ್ತೊಂದು ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಶ್ರೀ ವಿಷ್ಣು ದಶಾವತಾರ: ಹಿರಣ್ಯ ಕಶ್ಯಪನಾಗಿ ನವೀನ್!