ಚಕ್ರವರ್ತಿಯೊಂದಿಗೆ ರಾಧಿಕಾ ಕುಮಾರಸ್ವಾಮಿ ರೊಮ್ಯಾನ್ಸ್

Radhika Kumaraswamy to do romance with J D Chakravarthy in Contract
Highlights

ಎಚ್.ಡಿ.ಕುಮಾರಸ್ವಾಮಿ ಅವರು ರಾಜ್ಯದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ನಂತರ ಗೂಗಲ್‌ನಲ್ಲಿ ಹೆಚ್ಚು ಸರ್ಚ್ ಆದ ಹೆಸರು 'ರಾಧಿಕಾ ಕುಮಾರಸ್ವಾಮಿ.' ಮುಖ್ಯಮಂತ್ರಿಯೊಂದಿಗಿನ ವಿಶೇಷ ಬಾಂಧವ್ಯದ ಕಾರಣದಿಂದ ಈ ನಟಿಯ ಬಗ್ಗೆ ತಿಳಿದುಕೊಳ್ಳಲು ನೆಟ್ಟಿಗರು ಯತ್ನಿಸಿದ್ದಾರೆ. ಇದೀಗ ತೆಲುಗು ನಟನೊಂದಿಗೆ ರೊಮಾನ್ಸ್ ಮಾಡುತ್ತಿರುವ ಈ ಸ್ವೀಟಿ ಬಗ್ಗೆ ಮತ್ತೊಂದು ಸ್ವೀಟ್ ಸುದ್ದಿ ಇದೆ.

ಬೆಂಗಳೂರು: ಎಚ್.ಡಿ.ಕುಮಾರಸ್ವಾಮಿ ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಹಿಂದಿನ ದಿನ ಗೂಗಲ್‌ನಲ್ಲಿ ಹೆಚ್ಚು ಸರ್ಚ್ ಆದ ಹೆಸರು 'ರಾಧಿಕಾ ಕುಮಾರಸ್ವಾಮಿ.' ಮುಖ್ಯಮಂತ್ರಿಯೊಂದಿಗೆ ಇವರಿಗಿರುವ ವಿಶೇಷ ಬಾಂಧವ್ಯದ ಕಾರಣದಿಂದ ನೆಟ್ಟಿಗರು ಕುತೂಹಲದಿಂದ ಇವರ ಬಗ್ಗೆ ತಿಳಿದುಕೊಳ್ಳಲು ಗೂಗಲ್ ಮಾಡಿದ್ದಾರೆ.

ಇದೀಗ ಮತ್ತೆ ಚಿತ್ರರಂಗಕ್ಕೆ ಕಮ್ ಬ್ಯಾಕ್ ಮಾಡಿರುವ ರಾಧಿಕಾ, 'ಕಾಂಟ್ರ್ಯಾಕ್ಟ್' ಸಿನಿಮಾದ ಮೂಲಕವೂ ಸುದ್ದಿಯಲ್ಲಿದ್ದಾರೆ . ಅರ್ಜುನ್ ಸರ್ಜಾ ಅವರೊಂದಿಗೆ ರಾಧಿಕಾ ಈ ಚಿತ್ರದಲ್ಲಿ ನಟಿಸುತ್ತಿದ್ದು, ಈ ಚಿತ್ರ ಈಗಾಗಲೇ ಸಾಕಷ್ಟು ನಿರೀಕ್ಷೆಗಳನ್ನು ಮೂಡಿಸಿದೆ. 

ಈ ಚಿತ್ರದ ಮತ್ತೊಂದು ವಿಶೇಷವೆಂದರೆ ರಾಮ್ ಗೋಪಾಲ್ ವರ್ಮಾ ಗರಡಿಯಲ್ಲಿ ಬೆಳೆದ, ತೆಲುಗಿನ ಖ್ಯಾತ ನಟ ಜೆ.ಡಿ.ಚಕ್ರವರ್ತಿಯೂ ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ. ರಾಧಿಕಾ ಹಾಗೂ ಚಕ್ರವರ್ತಿ ಫೋಟೋಗಳು ಈಗಾಗಲೇ ಸುದ್ದಿ ಮಾಡಿದ್ದು,  ಚಿತ್ರದ ಬಗೆಗಿನ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದೆ. ಚಕ್ರವರ್ತಿ ನಟಿಸುತ್ತಿರುವ ಮೊದಲ ಸ್ಯಾಂಡಲ್‌ವುಡ್ ಚಿತ್ರವಿದು.
 

loader