ರಾಧಿಕಾ ಕುಮಾರಸ್ವಾಮಿ ’ದಮಯಂತಿ’ ಲುಕ್ ಹೇಗಿದೆ ನೋಡಿದ್ದೀರಾ? | ಹೊಸ ಅವತಾರದಲ್ಲಿ ಸ್ವೀಟಿ |
ಬೆಂಗಳೂರು (ಅ. 17): ನಟಿ ರಾಧಿಕಾ ಕುಮಾರಸ್ವಾಮಿ ದಮಯಂತಿಯಾಗಿ ತೆರೆ ಮೇಲೆ ಬರಲಿದ್ದಾರೆ. ಅವರ ಮುಂಬರುವ ಚಿತ್ರ ದಮಯಂತಿಗೆ ಮುಹೂರ್ತ ಫಿಕ್ಸ್ ಆಗಿದೆ. ರಾಧಿಕಾ ಹುಟ್ಟುಹಬ್ಬ ನವೆಂಬರ್ 12 ರಂದು ಚಿತ್ರದ ಮುಹೂರ್ತ ನಡೆಯಲಿದೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ದಮಯಂತಿ ಚಿತ್ರದಲ್ಲಿ ರಾಧಿಕಾ ಕುಮಾರಸ್ವಾಮಿ ಪ್ರಧಾನ ಪಾತ್ರದಲ್ಲಿ ನಟಿಸಲಿದ್ದಾರೆ. ಈ ಸಿನಿಮಾದ ಫಸ್ಟ್ ಲುಕ್ ರಿಲೀಸ್ ಆಗಿದೆ.

ಚಿತ್ರವನ್ನ ನವರಸನ್ ನಿರ್ದೇಶನ ಮಾಡುವುದರ ಜೊತೆಯಲ್ಲಿ ನಿರ್ಮಾಣವನ್ನು ಮಾಡುತ್ತಿದ್ದಾರೆ. ಇದೊಂದು ಹಾರರ್ ಸಿನಿಮಾವಾಗಿದ್ದು ಚಿತ್ರದಲ್ಲಿ ಅದ್ದೂರಿ ತಾರಾ ಬಳಗವಿದೆ.

